ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಇಂಜಿನೀಯರ್‌ ಅನ್ಕೊಂಡೇ ಹೆಣ್ಮಕ್ಕಳಿಗೆ ಖೆಡ್ಡಾ

Edited By:

Updated on: Apr 13, 2026 | 5:21 PM

ಮದುವೆಯನ್ನೇ ಒಂದು ವ್ಯವಹಾರ ಮಾಡಿಕೊಂಡಿದ್ದ ಕಾಮುಕ ಇಂಜಿನಿಯರ್ ಒಬ್ಬನ ಸರಣಿ ವಂಚನೆಗಳು ಬಟಾಬಯಲಾಗಿವೆ.. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿಗೆ ಧರ್ಮದೇಟು ಬಿದ್ದಿವೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಬೆಂಗಳೂರಿನ ಜಿಗಣಿ ಬಳಿಯ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, 2024ರ ಜನವರಿಯಲ್ಲಿ ಒಂದು ಮದುವೆಯಾಗಿದೆ.

ಬೆಂಗಳೂರು, (ಏಪ್ರಿಲ್ 13): ಮದುವೆಯನ್ನೇ ಒಂದು ವ್ಯವಹಾರ ಮಾಡಿಕೊಂಡಿದ್ದ ಕಾಮುಕ ಇಂಜಿನಿಯರ್ ಒಬ್ಬನ ಸರಣಿ ವಂಚನೆಗಳು ಬಟಾಬಯಲಾಗಿವೆ.. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿಗೆ ಧರ್ಮದೇಟು ಬಿದ್ದಿವೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಬೆಂಗಳೂರಿನ ಜಿಗಣಿ ಬಳಿಯ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, 2024ರ ಜನವರಿಯಲ್ಲಿ ಒಂದು ಮದುವೆಯಾಗಿದೆ. ಬಳಿಕ ಆಕೆ ಗರ್ಭಿಣಿಯಾದಾಗ ರವಿ ತನ್ನ ಆಟ ಶುರು ಮಾಡಿಕೊಂಡಿದ್ದ. ಮೊದಲ ಪತ್ನಿ ಗರ್ಭಿಣಿ ಆಗಿರುವಾಗ್ಲೇ ಹುಡುಗಿ ನೋಡೋಕೆ ಶುರು ಮಾಡಿದ್ದ ರವಿ, ತನಗಿನ್ನು ಮದುವೆ ಆಗಿಲ್ಲ ಎಂದು ತನ್ನ ಕುಟುಂಬದವರ ಜೊತೆ ಊರೂರು ಸುತ್ತುತ್ತಿದ್ದ. ಅಲ್ಲದೇ ಅಕ್ಟೋಬರ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಹೀಗೆ ಈತ ಶರ್ಟ್ ಬದಲಿಸೋ ರೀತಿ ಹೆಣ್ಣು ಮಕ್ಕಳನ್ನ ಬದಲಿಸುವ ಕಾಮುಕ ರವಿ ವಿರುದ್ಧ ಈಗ ಜಿಗಣಿ (Jigani) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೊದಲ ಪತ್ನಿ ಗರ್ಭಿಣಿಯಾದಾಗಲೇ ಮತ್ತೊಬ್ಬಳ ಜತೆ ನಿಶ್ಚಿತಾರ್ಥ! ಏಟು ಬಿದ್ದರೂ ಮತ್ತೆ ಮದುವೆಯಾದ ಎಂಜಿನಿಯರ್ ಕಥೆ ಏನಾಯ್ತು ಗೊತ್ತೇ?

Loading...
Unable to load recommendations.
Follow Us