ಒಂದೂವರೆ ಗಂಟೆಯಿಂದ ಆಗಸದಲ್ಲೇ ಸುತ್ತಾಡಿದ ವಿಮಾನ: ಮುಂದೇನಾಯ್ತು?
ಬೆಂಗಳೂರಿನಲ್ಲಿ ಏರ್ ಇಂಡಿಯಾ ವಿಮಾನ ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ಜೆಪಿ ನಗರ ಸುತ್ತ ಹತ್ತಕ್ಕೂ ಹೆಚ್ಚು ಬಾರಿ ವಿಮಾನ ರೌಂಡ್ಸ್ ಹೊಡೆದಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು. ಓರ್ವ ಯುವಕ ವಿಮಾನ ಸುತ್ತಾಟದ ವಿಡಿಯೋ ಮಾಡಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ನವೆಂಬರ್ 08: ನಗರದ ಸುತ್ತಮುತ್ತ ಒಂದೂವರೆ ಗಂಟೆಯಿಂದ ಆಗಸದಲ್ಲೇ ವಿಮಾನ ಸುತ್ತಾಟ ನಡೆಸಿರುವ ಘಟನೆ ನಡೆದಿದೆ. ಮೊದಲಿಗೆ ಲ್ಯಾಂಡಿಂಗ್ ಸಮಸ್ಯೆ ಎಂದು ಶಂಕಿಸಲಾಗಿತ್ತು. ಆದರೆ ತರಬೇತಿಗಾಗಿ ಆಕಾಶದಲ್ಲಿ ಹಾರಾಟ ನಡೆಸಿದ್ದಾಗಿ ಸಿಬ್ಬಂದಿಯಿಂದ ಸ್ಪಷ್ಟನೆ ನೀಡಲಾಗಿದೆ. ಇದೀಗ ವಿಮಾನ ಏರ್ಪೋಟ್ಗೆ ವಾಪಸ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.