ನಪುಂಸಕ, ಗಂಡಸೇ ಅಲ್ಲ: ಹೆಂಡ್ತಿ ಕುಟುಂಬಸ್ಥರ ಆರೋಪ, ಮನನೊಂದು ಪತಿ ಸಾವಿಗೆ ಶರಣು

Updated on: Dec 27, 2025 | 4:15 PM

ರಾಮಮೂರ್ತಿ ನಗರದಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ (Ganavi Suicide Case) ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಗಾನವಿ ಪತಿ ಸೂರಜ್ (Suraj) ಆತ್ಮಹತ್ಯೆ ಮಾಡಿಕೊಂಡರೆ ಅತ್ತೆ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗಾನವಿ ಆತ್ಮಹತ್ಯೆಯ ಬಳಿಕ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ(Nagpura) ತೆರಳಿದ್ದು ನಿನ್ನೆ ಸಂಜೆ ಜಯಂತಿ, ಸೂರಜ್ ಸೋನೆಗಾಂವ್‌ನಲ್ಲಿರುವ ರಾಯಲ್‌ ವಿಲ್ಲಾ ಹೋಟೆಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸೂರಜ್‌ ಮೃತಪಟ್ಟಿದ್ದರೆ, ಜಯಂತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಬೆಂಗಳೂರು, (ಡಿಸೆಂಬರ್ 27): ರಾಮಮೂರ್ತಿ ನಗರದಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ (Ganavi Suicide Case) ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಗಾನವಿ ಪತಿ ಸೂರಜ್ (Suraj) ಆತ್ಮಹತ್ಯೆ ಮಾಡಿಕೊಂಡರೆ ಅತ್ತೆ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗಾನವಿ ಆತ್ಮಹತ್ಯೆಯ ಬಳಿಕ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ(Nagpura) ತೆರಳಿದ್ದು ನಿನ್ನೆ ಸಂಜೆ ಜಯಂತಿ, ಸೂರಜ್ ಸೋನೆಗಾಂವ್‌ನಲ್ಲಿರುವ ರಾಯಲ್‌ ವಿಲ್ಲಾ ಹೋಟೆಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸೂರಜ್‌ ಮೃತಪಟ್ಟಿದ್ದರೆ, ಜಯಂತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಸೂರಜ್ ನಪುಂಸಕ, ಗಂಡಸೇ ಅಲ್ಲ. ಶ್ರೀಲಂಕಾಕ್ಕೆ ಹನಿಮೂನ್​​ಗೆ ಹೋದರೂ ಹೆಂಡ್ತಿಯನ್ನು ಮುಟ್ಟೇ ಇಲ್ಲ ಅಂತೆಲ್ಲಾ ಮೃತ ಗಾನವಿ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ಮನೆ ಮುಮದೆ ಹೋಗಿ ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಇನ್ಸ್​​ಪೆಕ್ಟರ್​​ ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: ನವವಿವಾಹಿತೆ ಸೂಸೈಡ್ ಕೇಸ್​ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!