ಅವರೇ ಮೇಳದಲ್ಲಿ ಮಹಿಳೆಯೊಬ್ಬರು ಡಿಕೆಶಿಗೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ (DK Shivakumar) ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೂ ಸ್ವಲ್ಪ ದಿನದಲ್ಲಿ ಡಿಕೆಶಿ ಸಿಎಂ ಆಗುವುದು ಗ್ಯಾರಂಟಿ ಎಂದು ಅವರ ಅಭಿಮಾನಿಗಳು ವಿಶ್ವಾದ ಮಾತುಗಳನ್ನಾಡುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರೇ ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎನ್ನುತ್ತಿದ್ದಾರೆ. ಇದರ ನಡುವೆ ಮಹಿಳೆಯೊಬ್ಬರು, ಡಿಸಿಎಂ ಸರ್ ಯಾವಾಗ ಸಿಎಂ ಆಗ್ತೀರಾ ಎಂದು ಡಿಕೆಶಿಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಅವರೇಬೇಳೆ ಮೇಳದಲ್ಲಿ ಈ ಪ್ರಸಂಗ ನಡೆದಿದೆ.
ಬೆಂಗಳೂರು, (ಡಿಸೆಂಬರ್ 27): ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ (DK Shivakumar) ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೂ ಸ್ವಲ್ಪ ದಿನದಲ್ಲಿ ಡಿಕೆಶಿ ಸಿಎಂ ಆಗುವುದು ಗ್ಯಾರಂಟಿ ಎಂದು ಅವರ ಅಭಿಮಾನಿಗಳು ವಿಶ್ವಾದ ಮಾತುಗಳನ್ನಾಡುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರೇ ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎನ್ನುತ್ತಿದ್ದಾರೆ. ಇದರ ನಡುವೆ ಮಹಿಳೆಯೊಬ್ಬರು, ಡಿಸಿಎಂ ಸರ್ ಯಾವಾಗ ಸಿಎಂ ಆಗ್ತೀರಾ ಎಂದು ಡಿಕೆಶಿಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಅವರೇಬೇಳೆ ಮೇಳದಲ್ಲಿ ಈ ಪ್ರಸಂಗ ನಡೆದಿದೆ.
ಹೌದು…ಬೆಂಗಳೂರಿನ ಬಸವನಗುಡಿಯ ಅವರೇಬೇಳೆ ಮೇಳದಲ್ಲಿ ಡಿಕೆ ಶಿವಕುಮಾರ್ ಭಾಷಣ ಮುಗಿಸಿ ಹೊರಟ್ಟಿದ್ದರು. ಈ ವೇಳೆ ಮಹಿಳೆಯೊಬ್ಬರು ಡಿಸಿಎಂ ಸರ್ ನೀವು ಸಿಎಂ ಆಗುವುದು ಯಾವಾಗ ಎಂದು ಡಿಕೆಶಿಗೆ ಕೇಳಿದ್ದಾರೆ. ಇದನ್ನು ಕೇಳಿಸಿಕೊಂಡು ಡಿಕೆ ಶಿವಕುಮಾರ್, ಏನೂ ಉತ್ತರಿಸದೆ ತೆರಳಿದರು.

