ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಬೆಂಗಳೂರಿನ ಪ್ರಮುಖ ವೃತ್ತಗಳು ಮತ್ತು ಕಟ್ಟಡಗಳನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ. ವಿಧಾನಸೌಧ, ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಮುಂತಾದ ಕಟ್ಟಡಗಳು ತ್ರಿವರ್ಣ ದೀಪಾಲಂಕಾರದಿಂದ ಅತ್ಯಂತ ಆಕರ್ಷಕವಾಗಿ ಕಾಣುತ್ತಿವೆ. ಈ ದೀಪಾಲಂಕಾರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ ಮತ್ತು ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿವೆ.
ಬೆಂಗಳೂರು, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬೆಂಗಳೂರಿನ ಪ್ರಮುಖ ವೃತ್ತ, ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸಿದವು. ಕೇಸರಿ, ಬಿಳಿ, ಹಸಿರು ಲೈಟಿಂಗ್ಸ್ ನೋಡುಗರ ಕಣ್ಮನ ಸೆಳೆದವು. ವಿಧಾನಸೌಧ, ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ, ಟೌನ್ ಹಾಲ್, ಕಾವೇರಿ ಭವನ, ಬಿಡಬ್ಲ್ಯುಎಸ್ಎಸ್ಬಿ ಕಚೇರಿ, ಬಿಬಿಎಂಪಿ ಕೇಂದ್ರ ಕಚೇರಿ ಬೆಸ್ಕಾಂ ಕಚೇರಿ ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ತ್ರಿವರ್ಣ ದೀಪಾಲಂಕಾರ ಮಾಡಲಾಗಿದೆ.
Latest Videos

