KIAL Terminal 2: ಸ್ವರ್ಗ ಲೋಕದಂತಿದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ 2

| Updated By: ಆಯೇಷಾ ಬಾನು

Updated on: Sep 12, 2023 | 2:48 PM

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2 ಇವತ್ತಿನಿಂದ ವಿದೇಶಿ ಪ್ರಯಾಣಿಕರಿಗೆ ಮುಕ್ತವಾಗುತ್ತಿದೆ. ಒಟ್ನಲ್ಲಿ, ಸಾವಿರಾರು ಕೋಟಿ ಖರ್ಚು ಮಾಡಿ ನೂತನ ಗಾರ್ಡನ್ ಟರ್ಮಿನಲ್ ಮತ್ತಷ್ಟು ದೇಶ ವಿದೇಶಿ ಪ್ರಯಾಣಿಕರ ಪ್ರಯಾಣಕ್ಕೆ ಲಭ್ಯವಾಗ್ತಿದೆ. ಸುಮಾರು 2 ಲಕ್ಷ 55 ಸಾವಿರದ 661 ಚದರ ಮೀಟರ್‌ನಲ್ಲಿ ನಿರ್ಮಾಣವಾಗಿರೋ ಟರ್ಮಿನಲ್‌-2 ಅಕ್ಷರಶಃ ಹೈಟೆಕ್‌ ಗಾರ್ಡನ್‌ನಂತಿದೆ.

ಬೆಂಗಳೂರು, ಸೆ.12: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ 2ರಲ್ಲಿ ಇಂದಿನಿಂದ ವಿದೇಶಿ ವಿಮಾನಗಳ ಹಾರಾಟ ಪ್ರಾರಂಭವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಕಳೆದ ವರ್ಷ ನವಂಬರ್‌ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ರು. ಅಂದಿನಿಂದ ಕೆಲ ತಾಂತ್ರಿಕ ಕಾಮಗಾರಿಗಳನ್ನ ನಡೆಸ್ತಿದ್ದ ಅಧಿಕಾರಿಗಳು ಈಗ ಕೆಐಎಬಿಯ ನೂತನ ಗಾರ್ಡನ್ ಟರ್ಮಿನಲ್ ಸಂಪೂರ್ಣ ಕಾರ್ಯಾರಂಭ ಆರಂಭಿಸಿದೆ. ಇಡೀ ಟರ್ಮಿನಲ್‌-2 ನಾಲ್ಕು ಸ್ತಂಭಗಳ ಆಧಾರದಲ್ಲಿ ನಿರ್ಮಿಸಲಾಗಿದೆ.

ಸುಮಾರು 2 ಲಕ್ಷ 55 ಸಾವಿರದ 661 ಚದರ ಮೀಟರ್‌ನಲ್ಲಿ ನಿರ್ಮಾಣವಾಗಿರೋ ಟರ್ಮಿನಲ್‌-2 ಅಕ್ಷರಶಃ ಹೈಟೆಕ್‌ ಗಾರ್ಡನ್‌ನಂತಿದೆ. ಟರ್ಮಿನಲ್‌ 2 ನಿರ್ಮಾಣವಾಗಿರೋದು 4 ಸ್ತಂಭಗಳ ಆಧಾರದಲ್ಲಿ. ಒಂದು ಉದ್ಯಾನದಲ್ಲಿ ಟರ್ಮಿನಲ್‌. ಅಂದ್ರೆ ನಾವು ಭಾರತದ ಗಾರ್ಡನ್‌ ಸಿಟಿ ಅನ್ನೋ ಸಂದೇಶ ಸಾರುತ್ತೆ. ಎರಡು ತಂತ್ರಜ್ಞಾನ. ಯಾಕಂದ್ರೆ, ನಾವು ಭಾರತದ ಸಿಲಿಕಾನ್ ವ್ಯಾಲಿ. ಮತ್ತು ಈ ಏರ್‌ಪೋರ್ಟ್ ನವೀಕರಿಸಬಹುದಾದ ಇಂಧನದಲ್ಲಿ ಕಾರ್ಯನಿರ್ವಹಿಸಬೇಕು. ನಾವು ಈಗಾಗ್ಲೇ ಶೇ.100ರಷ್ಟು ನವೀಕರಿಸಬಹುದಾದ ಇಂಧನ ಬಳಸುತ್ತಿದ್ದೇವೆ. ಸೌರಶಕ್ತಿ, ಪವನಶಕ್ತಿ, ಜಲಶಕ್ತಿ ಬಳಸುತ್ತಿದ್ದೇವೆ. ಮತ್ತು ನೀವು ಸುತ್ತು ಹಾಕಿದ್ರೆ ಗೊತ್ತಾಗುತ್ತೆ ಬೆಂಗಳೂರು, ಕರ್ನಾಟಕ ಮತ್ತು ದಕ್ಷಿಣ ಭಾರತದ ಕಲೆ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಪ್ರತಿಬಿಂಬಿಸುತ್ತೆ.

Follow us on