Bengaluru: KSRTC ಬಸ್ನ ಟಿಕೆಟ್ ಮೆಷಿನ್ನನ್ನೇ ಕದ್ದೊಯ್ದ ಕಳ್ಳ!
ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಟಿಕೆಟ್ ಮೆಷಿನ್ ಕಳ್ಳತನವಾಗಿದೆ. ಬೆಂಗಳೂರು-ಶಿರಸಿ ಬಸ್ನ ಕಂಡಕ್ಟರ್ ಬ್ಯಾಗ್‌ನಿಂದ ಖದೀಮರು ಮೆಷಿನ್ ಕದ್ದೊಯ್ದಿದ್ದಾರೆ. ಇದರಿಂದ ಎರಡು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದ್ದು, ಬಸ್ ನಿಲ್ಲಬೇಕಾಯಿತು. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಮ್ಯಾನುವಲ್ ಟಿಕೆಟ್ ನೀಡಿ ಸೇವೆ ಆರಂಭಿಸಲಾಯಿತು.
ಬೆಂಗಳೂರು, ಫೆಬ್ರವರಿ 19: ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಬಸ್ ಟಿಕೆಟ್ ಮೆಷಿನ್ನನ್ನೇ ಕದ್ದೊಯ್ದಿದ ಘಟನೆ ನಡೆದಿದೆ. ಬೆಂಗಳೂರು-ಶಿರಸಿ ಮಾರ್ಗದ ನಾನ್-ಎಸಿ ಸ್ಲೀಪರ್ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ಬ್ಯಾಗ್‌ನಲ್ಲಿದ್ದ ಟಿಕೆಟ್ ಮೆಷಿನ್ ಕಳ್ಳತನವಾಗಿದೆ. ಕೃತ್ಯದಿಂದಾಗಿ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್ ಎರಡು ಗಂಟೆಗಳ ಕಾಲ ನಿಂತಲ್ಲೇ ನಿಂತಿದ್ದು, ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಅಂತಿಮವಾಗಿ ಸಿಬ್ಬಂದಿ ಮ್ಯಾನುವಲ್ ಟಿಕೆಟ್ ನೀಡಿ ಬಸ್ ಸೇವೆ ಆರಂಭಿಸಿದ್ದಾರೆ. ಖದೀಮರು ಬ್ಯಾಗ್ ಕದ್ದೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳು ಟಿವಿ9ಗೆ ಲಭ್ಯವಾಗಿವೆ. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಪ್ರದೀಪ್, ಟಿವಿ9 ಬೆಂಗಳೂರು
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 19, 2026 08:38 AM
Follow Us
