ರೇಣುಕಾಸ್ವಾಮಿ ರೀತಿಯಲ್ಲೇ ಸಾಯ್ತೀಯಾ: ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿ ಧಮ್ಕಿ

Updated on: Oct 29, 2025 | 8:48 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣ ದೇಶದೆಲ್ಲೆಡೆ ಭಾರೀ ಸದ್ದು ಮಾಡಿದ್ದು, ಇದೀಗ ಇದೇ ಮಾದರಿಯಲ್ಲಿ ಸಾಯಿಸುವುದಾಗಿ ವ್ಯಕ್ತಿಯೋಬ್ಬರಿಗೆ ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್​ನಲ್ಲಿ ನಡೆದಿದೆ. ಮಂಜುನಾಥ್ ಹಾಗೂ ಬಾಗೇಗೌಡ ಎರಡು ವರ್ಷದಿಂದ ಸ್ನೇಹಿತರಾಗಿದ್ದು, ಗ್ಲೋಬಲ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಕೊನೆಗೆ ಕಂಪನಿ ನಷ್ಟವಾಗಿ ಈ ಪ್ರಕರಣ ಸಿಐಡಿಯಲ್ಲಿದೆ.

ಬೆಂಗಳೂರು, (ಅಕ್ಟೋಬರ್ 29): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣ ದೇಶದೆಲ್ಲೆಡೆ ಭಾರೀ ಸದ್ದು ಮಾಡಿದ್ದು, ಇದೀಗ ಇದೇ ಮಾದರಿಯಲ್ಲಿ ಸಾಯಿಸುವುದಾಗಿ ವ್ಯಕ್ತಿಯೋಬ್ಬರಿಗೆ ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್​ನಲ್ಲಿ ನಡೆದಿದೆ.

ಮಂಜುನಾಥ್ ಹಾಗೂ ಬಾಗೇಗೌಡ ಎರಡು ವರ್ಷದಿಂದ ಸ್ನೇಹಿತರಾಗಿದ್ದು, ಗ್ಲೋಬಲ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಕೊನೆಗೆ ಕಂಪನಿ ನಷ್ಟವಾಗಿ ಈ ಪ್ರಕರಣ ಸಿಐಡಿಯಲ್ಲಿದೆ. ಬಾಗೇಗೌಡನ ನಂಬಿ ಹಣ ಹೂಡಿಕೆ ಮಾಡಿ ನಷ್ಟವಾಗಿದ್ದರಿಂದ ಮಂಜುನಾಥ್ ಕೋಪಗೊಂಡಿದ್ದ. ಹೇಗಾದರೂ ಮಾಡಿ ತನ್ನ ಹಣ ವಸೂಲಿ ಮಾಡಬೇಕೆಂದು ಪ್ಲ್ಯಾನ್ ಮಾಡಿ ಬಾಗೇಗೌಡನನ್ನು ಹೋಟೆಲ್​​ ಗೆ ಕರೆಯಿಸಿಕೊಂಡಿದ್ದಾನೆ. ಬಳಿಕ ಆಚೆ ಹೋಗಿ ಬರೋಣ ಎಂದು ಗೋದಾಮಿಗೆ ಕರೆದೊಯ್ದಿದ್ದಾನೆ. ಬಳಿಕ ಗೋದಾಮಿಗೆ 8 ಜನರ ಕರೆಯಿಸಿ ಹಣ ಕೊಡುವಂತೆ ಬಾಗೇಗೌಡನ ಮೇಲೆ ಹಲ್ಲೆ ಮಾಡಿದ್ದಾನೆ.ಒಂದು ವೇಳೆ ಹಣ ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಆಗ್ತೀಯಾ ಎಂದು ಧಮ್ಕಿ ಹಾಕಿದ್ದಾನೆ.

ಇನ್ನು ಇದೇ ವೇಳೆ 44 ಲಕ್ಷದಷ್ಟು ಹಣ ಕೊಡಬೇಕು ಎಂದು ಬಾಗೇಗೌಡನಿಂದ ಬಲವಂತವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದು, ಬಾಗೇಗೌಡನ ಬಾಮೈದನಿಂದ ಚೆಕ್ ತರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Published on: Oct 29, 2025 08:47 PM