Namma Metro Yellow Line: ನಮ್ಮ ಮೆಟ್ರೋ ಯೆಲ್ಲೋ ಲೈನ್​ನಲ್ಲಿ ನಾಲ್ಕನೇ ಮೆಟ್ರೋ ರೈಲು ಸಂಚಾರ ಶುರು

Updated on: Sep 10, 2025 | 7:51 AM

16 ನಿಲ್ದಾಣಗಳುಳ್ಳ ನಮ್ಮ ಮೆಟ್ರೋ ಯೆಲ್ಲೋ ಲೈನ್​ನಲ್ಲಿ ನಾಲ್ಕನೇ ರೈಲು ಸಂಚಾರ ಬುಧವಾರ ಬೆಳಗ್ಗೆ ಶುರುವಾಗಿದೆ. ಇದರಿಂದ ಪ್ರಯಾಣಿಕರೂ ಖುಷಿಯಾಗಿದ್ದಾರೆ. ಆಗಸ್ಟ್ 10 ರಂದು ಈ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆ ನಂತರ ಮೂರು ರೈಲುಗಳು 25 ನಿಮಿಷಕ್ಕೊಂದರಂತೆ ಸಂಚಾರ ಮಾಡುತ್ತಿದ್ದವು.

ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್​ನಲ್ಲಿ ನಾಲ್ಕನೇ ಮೆಟ್ರೋ ರೈಲು ಸಂಚಾರ ಇಂದು ಬೆಳಗ್ಗೆ 6 ಗಂಟೆಗೆ ಶುರುಮಾಡಿದೆ. ಇದರೊಂದಿಗೆ, ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆಗೆ ತುಸು ರಿಲೀಫ್ ದೊರೆಯಲಿದೆ. ಈವರೆಗೆ ಕೇವಲ 3 ರೈಲುಗಳು ಇದ್ದುದರಿಂದ 25 ನಿಮಿಷಕ್ಕೆ ಒಮ್ಮೆ ಮೆಟ್ರೋ ರೈಲು ಸಂಚರಿಸುತ್ತಿತ್ತು. ಈಗ ಈ ಅವಧಿ 19 ನಿಮಿಷಕ್ಕೆ ಇಳಿಕೆಯಾಗಿದೆ.

ವಿವರಗಳಿಗೆ: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಹೊಸ ರೈಲು: ವೇಳಾಪಟ್ಟಿಯಲ್ಲಿ ಬದಲಾವಣೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More