ಫಾರಿನ್ ಸ್ಟೈಲಲ್ಲಿ ಪ್ರಪೋಸ್‌ ಮಾಡ್ತೀನಿ ಅಂತ ಕರೆದು ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ

Edited By:

Updated on: Apr 21, 2026 | 10:22 PM

ಪ್ರೇಯಸಿಯೊಬ್ಬರು, ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುತ್ತೆಂದು ಕರೆಯಿಸಿಕೊಂಡು ಪ್ರಿಯಕರನಿಗೆ (Lover) ಬೆಂಕಿ ಹಚ್ಚಿಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಅಂಜನಾನಗರದಲ್ಲಿ ನಡೆದಿದೆ. ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುತ್ತೆಂದು ಪ್ರಿಯಕರನನ್ನು ಮನೆಗೆ ಕರೆಯಿಸಿ ಬಳಿಕ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ.

ಬೆಂಗಳೂರು, (ಏಪ್ರಿಲ್ 21): ಪ್ರೇಯಸಿಯೊಬ್ಬರು, ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುತ್ತೆಂದು ಕರೆಯಿಸಿಕೊಂಡು ಪ್ರಿಯಕರನಿಗೆ (Lover) ಬೆಂಕಿ ಹಚ್ಚಿಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಅಂಜನಾನಗರದಲ್ಲಿ ನಡೆದಿದೆ. ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುತ್ತೆಂದು ಪ್ರಿಯಕರನನ್ನು ಮನೆಗೆ ಕರೆಯಿಸಿ ಬಳಿಕ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ.

ಈ ಪ್ರಕರಣ ಸಂಬಂಧ ಬೆಂಗಳೂರು ವಾಯವ್ಯ ವಿಭಾಗದ ಡಿಸಿಪಿ ನಾಗೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈ ಘಟನೆ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣುತಿತ್ತು. ಆದರೆ, ಯುವತಿಯೇ ಯುವಕನನ್ನು ಕೊಲೆ ಮಾಡಿದ್ದಾಳೆ. ಕರೆ ಮಾಡಿ ಪ್ರಿಯಕರನನ್ನ ಯುವತಿ ಮನೆಗೆ ಕರೆಸಿದ್ದಳು. ಬಳಿಕ ಪೆಟ್ರೋಲ್ ಹಾಗೂ ಸೀಮೆಎಣ್ಣೆ ಬಳಸಿ ಹತ್ಯೆ ಮಾಡಿದ್ದಾಳೆ. ಇನ್ನು ಈ ಕೃತ್ಯದಲ್ಲಿ ಒಬ್ಬಳೇ ಭಾಗಿಯಾಗಿದ್ದಾಳೋ ಅಥವಾ ಇನ್ನಾರಾದರೂ ಇದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

Loading...
Unable to load recommendations.
Follow Us
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More