ಬೆಂಗಳೂರು: ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ದುರಂತ; ಪರಮೇಶ್ವರ್ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿರುವ ಪ್ಲಾಸ್ಟಿಕ್ ಮತ್ತು ರಬ್ಬರ್ ಮಾಟ್ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಐದು ಜನರು ಮೃತಪಟ್ಟಿದ್ದಾರೆ. ಬೆಳಗ್ಗೆ ಮೂರು ಗಂಟೆಗೆ ಘಟನೆ ನಡೆದಿದ್ದು, ಗೃಹ ಸಚಿವ ಪರಮೇಶ್ವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕ ಜಾಗದಲ್ಲಿ 5-6 ಅಂತಸ್ತುಗಳ ನಿರ್ಮಾಣ ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳ ದೊಡ್ಡ ಪ್ರಮಾಣದ ದಾಸ್ತಾನು ಅಗ್ನಿ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಎಫ್ಎಸ್ಎಲ್ ಮತ್ತು ಅಗ್ನಿಶಾಮಕ ದಳ ತನಿಖೆ ನಡೆಸುತ್ತಿವೆ.
ಬೆಂಗಳೂರು, ಆಗಸ್ಟ್ 16: ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿನ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ಬೆಳಗ್ಗೆ ಮೂರು ಗಂಟೆ ವೇಳೆಗೆ ಈ ಅವಘಡ ನಡೆದಿದೆ. ಅಗ್ನಿ ದುರಂತದಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ. ಪ್ಲಾಸ್ಟಿಕ್, ರಬ್ಬರ್ ಮ್ಯಾಟ್ಗಳನ್ನು ದಾಸ್ತಾನು ಮಾಡಲಾಗಿತ್ತು. ತುಂಬಾ ಚಿಕ್ಕ ಜಾಗ ಆಗಿರುವುದರಿಂದ ಮೇಲೆ ಹೋಗೋಕಾಗ್ತಿಲ್ಲ 30/40 ಜಾಗದಲ್ಲಿ ಐದಾರು ಅಂತಸ್ತುಗಳ ಕಟ್ಟಡ ಕಟ್ಟಿದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ಚೆಕ್ ಮಾಡಲು ಹೇಳುತ್ತೇವೆ. ಎಫ್ಎಸ್ಎಲ್, ಅಗ್ನಿಶಾಮಕ ದಳ ಪರಿಶೀಲನೆ ಮಾಡಲಿವೆ. ಯಾವ ಕಾರಣಕ್ಕೆ ಘಟನೆ ನಡೆದಿದೆ ಅನ್ನೋದು ಗೊತ್ತಾಗಿಲ್ಲ. ಪರಿಹಾರ ನೀಡುವ ಬಗ್ಗೆ ಸರ್ಕಾರದ ಜೊತೆಗೆ ಮಾತಾಡುತ್ತೇನೆ ಎಂದರು.

