ಬೆಂಗಳೂರಿನಲ್ಲಿ ಗುಂಡಿ ಪೂಜೆ: ರಸ್ತೆ ಸಮಸ್ಯೆ ವಿರುದ್ಧ ನಾಗರಿಕರ ವಿನೂತನ ಪ್ರತಿಭಟನೆ
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನಾಗರಿಕರು ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಗುಂಡಿಗಳನ್ನು ಮುಚ್ಚುವ ಬದಲಿಗೆ, ಕೆಲವರು ಗುಂಡಿಗಳಿಗೆ ಹೂ ಹಾಕಿ ದೀಪ ಬೆಳಗಿ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 'ಗುಂಡಿ ಪೂಜೆ' ಮೂಲಕ ಜನರು ಸರ್ಕಾರಕ್ಕೆ, ಸಿಂಗಾಪುರ-ಲಂಡನ್ ರಸ್ತೆಗಳ ಭರವಸೆ ನೀಡಿದ ಜನಪ್ರತಿನಿಧಿಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಇದು ಒತ್ತಡ ಹೇರುತ್ತಿದೆ.
ಬೆಂಗಳೂರು, ಅ.23: ಬೆಂಗಳೂರಿನ ರಸ್ತೆ ಗುಂಡಿಗಳ (Bangalore potholes) ಬಗ್ಗೆ ದಿನಕ್ಕೊಂದು ಟ್ರೋಲ್, ಪೋಸ್ಟ್ಗಳನ್ನು ಹಾಕಿ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಎಲ್ಲ ಪ್ರಯತ್ನಗಳು ನಡೆಯಿತು. ಉದ್ಯಮಿಗಳು, ಹಾಗೂ ವಿದೇಶಿಗರು ಕೂಡ ಈ ಬಗ್ಗೆ ಪೋಸ್ಟ್ ಹಾಕಿ ಸಿದ್ಧರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದು ಆಯಿತು. ಸರ್ಕಾರ ಮತ್ತು ಅಧಿಕಾರಿಗಳು ಈ ಯಾವುದಕ್ಕೂ ಕೇರ್ ಎಂದಿಲ್ಲ. ಕೊನೆಗೆ ಜನರೇ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಇನ್ನು ಕೆಲವರು ಸರ್ಕಾರಕ್ಕೆ ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಇಲ್ಲೊಂದು ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಸ್ತೆ ಮಧ್ಯೆ ಆಗಿರುವ ದೊಡ್ಡ ಗುಂಡಿಗೆ ಹೂ ಹಾಕಿ, ದೀಪ ಇಟ್ಟು ಪೂಜೆ ಮಾಡಿದ್ದಾರೆ. ಈ ವಿಡಿಯೋಗೆ ಹೀಗೆ ಶೀರ್ಷಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುಂಡಿ ಪೂಜೆ! ಸಿಂಗಾಪುರ ಮತ್ತು ಲಂಡನ್‌ನಂತಹ ರಸ್ತೆಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ ನಾಯಕರ ಸುಂದರ ಫ್ಲೆಕ್ಸ್‌ಗಳನ್ನು ತಂದು ಹೂವುಗಳನ್ನು ಅರ್ಪಿಸುವ ಸಮಯ ಎಂದು ಬರೆದುಕೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ