AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ದೀಪಾವಳಿ: ವಾಯು ಗುಣಮಟ್ಟದಲ್ಲಿ ಸುಧಾರಣೆ, ಆದರೆ ಶಬ್ದ ಮಾಲಿನ್ಯ ಹೆಚ್ಚಳ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ವರದಿ ಪ್ರಕಾರ, ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ AQI ಶೇ. 98ರಷ್ಟು ಉತ್ತಮವಾಗಿದೆ. ಆದರೆ, ಶಬ್ದ ಮಾಲಿನ್ಯ ತೀವ್ರವಾಗಿ ಏರಿಕೆ ಕಂಡಿದೆ. AQI 100 ದಾಟಿದರೆ ಅಪಾಯಕಾರಿ ಎಂದು KSPCB ಎಚ್ಚರಿಸಿದೆ.

ಬೆಂಗಳೂರು ದೀಪಾವಳಿ: ವಾಯು ಗುಣಮಟ್ಟದಲ್ಲಿ ಸುಧಾರಣೆ, ಆದರೆ ಶಬ್ದ ಮಾಲಿನ್ಯ ಹೆಚ್ಚಳ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 23, 2025 | 11:01 AM

Share

ಬೆಂಗಳೂರು, ಅ.23: ಈ ಬಾರಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬ ಹೇಳಿಕೊಳ್ಳುವಷ್ಟು ಸಂಭ್ರಮದಿಂದ ಇರಲಿಲ್ಲ. ಅದರೂ ಜನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿಪರೀತ ಪಟಾಕಿ ಸಿಡಿಸಿದ್ದಾರೆ. ಇದರಿಂದ ನಗರದ ಹವಮಾನ ಹಾಗೂ ವಾತಾವರಣ ಹೇಗಿರಬಹುದು? ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ವರದಿಯೊಂದನ್ನು ನೀಡಿದೆ. ಬೆಂಗಳೂರಿನಲ್ಲಿ ಗಮನಾರ್ಹವಾಗಿ ಶುದ್ಧ ಗಾಳಿ ಕಂಡುಬಂದಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಹಿಂದಿನ ವರ್ಷಗಳಿಗಿಂತ ಗಮನಾರ್ಹ ಸುಧಾರಣೆಯಾಗಿದೆ ಎಂದು ಹೇಳಿದೆ. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದ್ರೆ ಈ ಬಾರಿ ನಗರದ AQI (Air Quality Index) ಶೇ. 98 ರಷ್ಟು ಉತ್ತಮವಾಗಿದೆ. ನಗರದಲ್ಲಿ ಇತರ ದಿನದಂದು ದಾಖಲಾಗುವ ಪ್ರಮಾಣಕ್ಕಿಂತ ಶೇ. 7 ರಷ್ಟು ಕಡಿಮೆಯಾಗಿದೆ.

ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಶಬ್ದ ಮಾಲಿನ್ಯವು ಗಮನಾರ್ಹವಾಗಿ ಏರಿಕೆ ಕಂಡಿದ್ದು, ನಗರದ ಹಲವಾರು ಪ್ರದೇಶಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಹೆಚ್ಚಿನ ಶಬ್ದದ ಮಟ್ಟ ಉಂಟಾಗಿದೆ ಎಂದು ವರದಿಯಾಗಿವೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ಕೂಡ ವರದಿಯನ್ನು ಮಾಡಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯ ವಾಯು ಗುಣಮಟ್ಟ ಸೂಚ್ಯಂಕ ತೋರಿಸಿದೆ. ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆಗಳಲ್ಲಿ 104 ಮತ್ತು 109 ಎಕ್ಯೂಐ ಮಟ್ಟಗಳು ದಾಖಲಾಗಿದ್ದು, ಇದು ಸುರಕ್ಷಿತ ಮಿತಿಗಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ತೀವ್ರ ಏರಿಕೆಯಾಗಿದೆ.

ವಿಶೇಷವಾಗಿ ಪೀಣ್ಯದಲ್ಲಿ, ಹಬ್ಬದ ಮೊದಲ ದಿನಕ್ಕೆ ಹೋಲಿಸಿದ್ರೆ ಮಾಲಿನ್ಯ ಮಟ್ಟದಲ್ಲಿ ಶೇ. 52 ರಷ್ಟು ಏರಿಕೆ ಕಂಡುಬಂದಿದೆ. ಹೊಸಕೋಟೆ ಮತ್ತು ದಾಸರಹಳ್ಳಿಯಲ್ಲಿಯೂ ಸಹ ಕೂಡ ಇದೇ ಮಟ್ಟವನ್ನು ಹೊಂದಿದೆ. ಇನ್ನು ಬೆಂಗಳೂರಿನ ಹಲವು ಕಡೆ ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಹೆಬ್ಬಾಳ, ಜಯನಗರ, ಹೊಂಬೇಗೌಡ ನಗರ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಮೈಸೂರು ರಸ್ತೆಗಳಲ್ಲಿ ಕಳೆದ ವರ್ಷದ ಹಬ್ಬದ ಅವಧಿಗೆ ಹೋಲಿಸಿದರೆ ಸುಧಾರಿತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಂಕಿಅಂಶಗಳನ್ನು ವರದಿ ಮಾಡಿವೆ. ಜನರು ಬೆಂಗಳೂರ ಬಿಟ್ಟು ಊರಿಗೆ ಹೋದ ಕಾರಣ ಹಾಗೂ ವಾಹನ ದಟ್ಟಣೆ ಇಲ್ಲದ ಕಾರಣ ಈ ಕುಸಿತ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಒಂದು ವಾರದೊಳಗೆ ಬೆಂಗಳೂರಿನ ಎಲ್ಲಾ ಗುಂಡಿಗಳನ್ನು ಮುಚ್ಚಿ, ಜಿಬಿಎ ಆಯುಕ್ತರಿಗೆ ಸಿಎಂ ಖಡಕ್ ಸೂಚನೆ

ಮಂಗಳವಾರ ರಾತ್ರಿ ಮತ್ತು ಬುಧವಾರ ಪಟಾಕಿ ಸಿಡಿಸುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಎಚ್ಚರಿಸಿದ್ದಾರೆ. 100 ಕ್ಕಿಂತ ಹೆಚ್ಚಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹಾನಿಕಾರಕ ಎಂದು ಹೇಳಲಾಗಿದೆ. ವಿಶೇಷವಾಗಿ ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಜನರಿಗೆ, ಮಕ್ಕಳು ಮತ್ತು ವೃದ್ಧರಿಗೆ ಇದು ಅಪಾಯ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ