AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ.ಕೃತಿಕಾರೆಡ್ಡಿ ಕೊಲೆ ಕೇಸ್​: ತಪ್ಪೊಪ್ಪಿಕೊಂಡ ಪತಿ; ಮಹೇಂದ್ರರೆಡ್ಡಿ ಪ್ಲ್ಯಾನ್​ ಹೇಗಿತ್ತು?

ಬೆಂಗಳೂರಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಡಾ.ಕೃತಿಕಾರೆಡ್ಡಿ ಕೊಲೆ ಕೇಸ್​ನ ಬಗೆದಷ್ಟೂ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ದೊರೆಯುತ್ತಿವೆ. ಆರೋಪಿ, ಕೃತಿಕಾ ಪತಿ ಡಾ. ಮಹೇಂದ್ರರೆಡ್ಡಿ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. ಹೆಂಡತಿ ಸಾಯಬೇಕು, ಆದರೆ ತಾನು ಕೆಟ್ಟವನಾಗಬಾರದು. ಆಸ್ತಿಯೂ ಕೈತಪ್ಪಿ ಹೋಗಬಾರದು ಎಂಬುದು ಆರೋಪಿಯ ಪ್ಲ್ಯಾನ್​ ಆಗಿತ್ತು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡೇ ಡಾ.ಮಹೇಂದ್ರ ರೆ್ಡಿ ಕೃತ್ಯ ಎಸಗಿದ್ದ ಎಂಬುದು ಗೊತ್ತಾಗಿದೆ.

ಡಾ.ಕೃತಿಕಾರೆಡ್ಡಿ ಕೊಲೆ ಕೇಸ್​: ತಪ್ಪೊಪ್ಪಿಕೊಂಡ ಪತಿ; ಮಹೇಂದ್ರರೆಡ್ಡಿ ಪ್ಲ್ಯಾನ್​ ಹೇಗಿತ್ತು?
ತಪ್ಪೊಪ್ಪಿಕೊಂಡ ಆರೋಪಿ.
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಪ್ರಸನ್ನ ಹೆಗಡೆ|

Updated on:Oct 23, 2025 | 11:50 AM

Share

ಬೆಂಗಳೂರು, ಅಕ್ಟೋಬರ್​ 23: ಡಾ. ಕೃತಿಕಾರೆಡ್ಡಿ (Kruthika Reddy) ಕೊಲೆ ಪ್ರಕರಣ ಸಂಬಂಧ ಆರೋಪಿ, ಪತಿ ಡಾ.ಮಹೇಂದ್ರರೆಡ್ಡಿ ಪೊಲೀಸರ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. ಇದರ ಜೊತೆಗೆ ತನಿಖೆ ವೇಳೆ ಕೆಲ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಕೊಲೆ ಹಿಂದಿನ ಕಾರಣ ಮತ್ತು ಅದಕ್ಕಾಗಿ ಆರೋಪಿಯ ಪ್ಲ್ಯಾನ್​ ಹೇಗಿತ್ತು ಎಂಬುದನ್ನೀಗ ಪೊಲೀಸರು ಬಹಿರಂಗಗೊಳಿಸಿದ್ದಾರೆ. ಡಾ. ಕೃತಿಕಾರೆಡ್ಡಿಯದ್ದು ಸಹಜ ಸಾವು ಎಂದು ಬಿಂಬಿಸದರೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಹೀಗಾಗಿ ಸಾವಿಗೆ ಅಸಲಿ ಕಾರಣ ಏನೆಂಬುದು ಗೊತ್ತಾಗಲ್ಲ ಎಂಬುದು ಡಾ. ಮಹೇಂದ್ರ ರೆಡ್ಡಿಯ ಪ್ಲ್ಯಾನ್​ ಆಗಿತ್ತು.

ಕೊಲೆ ಮಾಡಿದ್ದು ಹೇಗೆ?

ಡಾ. ಕೃತಿಕಾರೆಡ್ಡಿಗಿದ್ದ ಆರೋಗ್ಯ ಸಮಸ್ಯೆಯಿಂದ ಪತಿ ಡಾ. ಮಹೇಂದ್ರರೆಡ್ಡಿ ಬೇಸತ್ತಿದ್ದ. ತನಗೆ ವೈಯಕ್ತಿಕ ಜೀವನ ಇಲ್ಲ ಎಂದು ಕೋಪಕೊಂಡಿದ್ದ. ಹೀಗಂತಾ ವಿಚ್ಛೇದನ ಪಡೆದರೆ ತನಗೆ ಏನು ಸಿಗಲ್ಲ ಎಂಬುದು ಆರೋಪಿಗೆ ಗೊತ್ತಿತ್ತು. ಹಾಗಾಗಿ ಹೆಂಡತಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯೋಜನೆ ಸಿದ್ಧಪಡಿಸಿದ್ದ. ಇದರ ಭಾಗವಾಗಿ ಡಾ.ಕೃತಿಕಾಗೆ ಅನಸ್ತೇಶಿಯಾ ಕೊಟ್ಟಿದ್ದ. ಆಕೆಯ ದೇಹದ ತೂಕಕ್ಕೆ ಕೇವಲ ಏಳರಿಂದ ಎಂಟು ಎಂ.ಎಲ್. ಅನಸ್ತೇಶಿಯಾ ನೀಡಬಹುದಾಗಿತ್ತು. ಇದು ಗೊತ್ತಿದ್ದರೂ ಆ ದಿನ ಹದಿನೈದು ಎಂ.ಎಲ್​.  ನೀಡಿದ್ದ ಎಂಬುದು ವೈಜ್ಞಾನಿಕ ಸಾಕ್ಷಿಗಳಿಂದ ದೃಢಪಟ್ಟಿವೆ.

ಇದನ್ನೂ ಓದಿ: ವೈದ್ಯೆ ಕೊಲೆ ಕೇಸ್​​: ಮಾರಕ ಡ್ರಗ್ಸ್​​ನ ಮೂಲ ಬಯಲು; ಕೃತಿಕಾಳ ರೂಮ್​ನಲ್ಲಿ ಔಷಧಗಳು ಪತ್ತೆ

ಪ್ರಕರಣ ಸಂಬಂಧ ಬಂಧಿತ ಆರೋಪಿ ಡಾ.ಮಹೇಂದ್ರರೆಡ್ಡಿಯ ಮೊಬೈಲ್​ ನ ಡಾಟಾ ಕೂಡ ಪೊಲೀಸರು ರಿಟ್ರೀವ್​ ಮಾಡಿದ್ದು, ಈ ವೇಳೆ ಹಲವು ಮಹತ್ವದ ಸಾಕ್ಷಿಗಳು ದೊರೆತಿವೆ. I have killed Kruthika ಎಂದು ಆರೋಪಿ ಸಂದೇಶ ಕಳುಹಿಸಿದ್ದ ಬಗ್ಗೆ ಗೊತ್ತಾಗಿದೆ. ಹೆಂಡತಿ ಸಾಯಬೇಕು, ಆದರೆ ತಾನು ಕೆಟ್ಟವನಾಗಬಾರದು. ಆಸ್ತಿಯೂ ಕೈತಪ್ಪಿ ಹೋಗಬಾರದು ಎಂಬುದು ಆರೋಪಿಯ ಪ್ಲ್ಯಾನ್​ ಆಗಿತ್ತು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡೇ ಡಾ.ಮಹೇಂದ್ರ ರೆಡ್ಡಿ ಕೃತ್ಯ ಎಸಗಿದ್ದ ಎಂಬುದು ಗೊತ್ತಾಗಿದೆ. ಇದರ ಜೊತೆಗೆ ಫ್ರೋಫಾಪಾಲ್ ಖರೀದಿ ಮಾಡಿದ್ದಕ್ಕೆ ಸಾಕ್ಷಿ, ಇಂಜೆಕ್ಷನ್ ಕೊಟ್ಟಿದ್ದಕ್ಕೆ ಕ್ಯಾನ್ ಮತ್ತು ಮೃತ ದೇಹದಲ್ಲಿ ಅರವಳಿಕೆ ಅಂಶ ಪತ್ತೆ ಸೇರಿ ಕೊಲೆ ಮಾಡಿರುವ ಬಗ್ಗೆ ಓರ್ವರ ಜೊತೆ ಚಾಟ್​ ಮಾಡಿರುವ ಸಂಗತಿಯನ್ನೀಗ ಪೊಲೀಸರು ಬಟಾಬಯಲು ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:46 am, Thu, 23 October 25

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?