Bengaluru rains: ಧಾರಾಕಾರ ಮಳೆಯಿಂದಾಗಿ ಹರಿಯುವ ನದಿಯಂತಾದ ಬನ್ನೇರುಘಟ್ಟ ರಸ್ತೆ; ವೀಡಿಯೋ ವೈರಲ್
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಹರಿಯುವ ನದಿಯಂತಾಗಿದೆ. ರಸ್ತೆಯಿಡೀ ನೀರು ತುಂಬಿಕೊಂಡು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಆಸ್ಪತ್ರೆಗಳು, ಟೆಕ್ ಪಾರ್ಕ್ಗಳಿರುವ ಬನ್ನೇರುಘಟ್ಟ ಬೆಳವಣಿಗೆಯ ಸಂಕೇತವೆಂದು ಗುರುತಿಸಿಕೊಂಡಿದೆ. ಆದರೆ ಮಳೆಯಿಂದಾದ ಈ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಲ್ಲಿ ಬೇಸರವನ್ನುಂಟುಮಾಡಿದೆ. ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಕರ್ನಾಟಕ ಪೋರ್ಟ್ಫೋಲಿಯೊ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಬೆಂಗಳೂರು, ಅಕ್ಟೋಬರ್ 4: ಬ್ರ್ಯಾಂಡ್ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಈಗ ಹರಿಯುವ ನದಿಯಂತಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಇಡೀ ರಸ್ತೆ ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಆಸ್ಪತ್ರೆಗಳು, ಟೆಕ್ ಪಾರ್ಕ್‌ಗಳು ಮತ್ತು ಮಾಲ್‌ಗಳೊಂದಿಗೆ ನಗರ ಬೆಳವಣಿಗೆಯ ಸಂಕೇತವೆಂದು ಬಿಂಬಿಸಲ್ಪಡುವ ಬನ್ನೇರುಘಟ್ಟ ರಸ್ತೆಯನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಷ್ಟು ಹದಗೆಟ್ಟ ಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳಿಗೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಾಗಿದೆ ಎಂದು ಕರ್ನಾಟಕ ಪೋರ್ಟ್ಫೋಲಿಯೋ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ವೀಡಿಯೋ ಇಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ