ಬೆಂಗಳೂರಿನಲ್ಲಿ ಭಾರೀ ಮಳೆ; ಯಲಹಂಕದ ಜಕ್ಕೂರು ರಸ್ತೆ ಜಲಾವೃತ, ಮನೆಗಳಿಗೆ ನೀರು ನುಗ್ಗಿ ಅವಾಂತರ

| Updated By: preethi shettigar

Updated on: Nov 22, 2021 | 8:51 AM

ಯಲಹಂಕದ ಜಕ್ಕೂರು ರಸ್ತೆ ಜಲಾವೃತವಾದ ಕಾರಣ ಸುರಭಿ ಲೇಔಟ್‌ಗೂ ಮಳೆ ನೀರು ನುಗ್ಗಿದೆ. ರಾಜಕಾಲುವೆ ತುಂಬಿ ರಸ್ತೆಯಲ್ಲೇ ನೀರು ಹರಿದಿದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಯಲಹಂಕ ಅಂಡರ್ ಪಾಸ್​ನಲ್ಲಿ ನೀರು ತುಂಬಿದ ಕಾರಣ, ಮೂರ್ನಾಲ್ಕು ಬಿಎಂಟಿಸಿ ಬಸ್​ಗಳು ಸಿಲುಕಿವೆ.

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ, ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿದೆ. ಅದರಲ್ಲೂ ಯಲಹಂಕದ ಜಕ್ಕೂರು ರಸ್ತೆ ಜಲಾವೃತವಾದ ಕಾರಣ ಸುರಭಿ ಲೇಔಟ್‌ಗೂ ಮಳೆ ನೀರು ನುಗ್ಗಿದೆ. ರಾಜಕಾಲುವೆ ತುಂಬಿ ರಸ್ತೆಯಲ್ಲೇ ನೀರು ಹರಿದಿದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಯಲಹಂಕ ಅಂಡರ್ ಪಾಸ್​ನಲ್ಲಿ ನೀರು ತುಂಬಿದ ಕಾರಣ, ಮೂರ್ನಾಲ್ಕು ಬಿಎಂಟಿಸಿ ಬಸ್​ಗಳು ಸಿಲುಕಿವೆ. ಹೀಗಾಗಿ ಕೆಲ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪೊಲೀಸ್ ಸ್ಟೇಷನ್ ರಸ್ತೆ-ಅಳ್ಳಾಲಸಂದ್ರ ರಸ್ತೆಯೂ ಜಲಾವೃತವಾದ ಹಿನ್ನಲೆ ನಡುರಸ್ತೆಯಲ್ಲೇ ಸುಮಾರು 25ಕ್ಕೂ ಹೆಚ್ಚು ಕಾರುಗಳು ಕೆಟ್ಟುನಿಂತವೆ.

ಅಕಾಲಿಕ ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿದ್ದಾರೆ. ಬೆಂಗಳೂರಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಇನ್ನೂ 2 ದಿನ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:
Bengaluru News: ಬೆಂಗಳೂರು ನಗರದಲ್ಲಿ ಇನ್ನೂ 2 ದಿನ ಸಾಧಾರಣ ಮಳೆ ಸಾಧ್ಯತೆ

ಮಳೆಗೆ ಮುಳುಗುತ್ತಿದೆ ಬೆಂಗಳೂರು; ಬಿಬಿಎಂಪಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಾಯದ ಅಂಚಿನಲ್ಲಿದೆ ಈ 10 ಪ್ರದೇಶಗಳು