ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನಿಂದಲೇ ಆಡಳಿತ ನಡೆಸಿದರೆ ಎಷ್ಟು ಚೆನ್ನ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 10, 2022 | 11:04 AM

ಪ್ರಧಾನಿಗಳೇ, ಬೇಗ ಬನ್ನಿ ಮತ್ತು ತಡವಾಗಿ ರಾಷ್ಟ್ರದ ರಾಜಧಾನಿಗೆ ವಾಪಸ್ಸು ಹೋಗಿ, ಇದು ಎಲ್ಲ ಬೆಂಗಳೂರು ನಿವಾಸಿಗಳ ಒಕ್ಕೊರಲ ಆಗ್ರಹ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಬೆಂಗಳೂರಲ್ಲೇ ಒಂದಷ್ಟು ದಿನ ವಾಸ್ತವ್ಯ ಹೂಡಿದರೆ ನಗರದ ರಸ್ತೆಗಳಲ್ಲಿನ ಗುಂಡಿಗಳಂತೂ (potholes) ಬಿಡಿ, ರಸ್ತೆ ಮತ್ತು ಅವುಗಳ ಪಕ್ಕದ ಪಾವ್ಮೆಂಟ್ ಗಳು ಕನ್ನಡಿಗಳಂತೆ ಝಗಮಗಿಸಲಾರಂಭಿಸುತ್ತವೆ. ಪ್ರಧಾನಿ ಮೋದಿ ಅವರು ನಾಳೆ ರಾಜ್ಯದ ರಾಜಧಾನಿಗೆ ಆಗಮಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹಾಗಾಗೇ, ರಸ್ತೆಗಳ ಡಾಂಬರೀಕರಣ (asphalting) ಸೇರಿದಂತೆ ನಗರದ ಸೌಂದರ್ಯೀಕರ ಕೆಲಸವೂ ಭರದಿಂದ ಸಾಗುತ್ತಿದೆ. ಪ್ರಧಾನಿಗಳೇ, ಬೇಗ ಬನ್ನಿ ಮತ್ತು ತಡವಾಗಿ ರಾಷ್ಟ್ರದ ರಾಜಧಾನಿಗೆ ವಾಪಸ್ಸು ಹೋಗಿ, ಇದು ಎಲ್ಲ ಬೆಂಗಳೂರು ನಿವಾಸಿಗಳ ಒಕ್ಕೊರಲ ಆಗ್ರಹ!