ಬೆಂಗಳೂರು 7 ಕೋಟಿ ರೂ. ದರೋಡೆ ಪ್ರಕರಣ: ಆಂಧ್ರದ ಚಿತ್ತೂರು ಬಳಿ ಹಣದ ಬಾಕ್ಸ್​ಗಳು ಪತ್ತೆ

Updated on: Nov 22, 2025 | 9:28 AM

ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದ 7.11 ಕೋಟಿ ರೂಪಾಯಿ ಎಟಿಎಂ ಹಣದ ದರೋಡೆ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಬಳಿ ದರೋಡೆಕೋರರು ಎಸೆದಿದ್ದ ಸಿಎಂಎಸ್ ವಾಹನದ ಹಣದ ಬಾಕ್ಸ್​ಗಳು ಪತ್ತೆಯಾಗಿವೆ. ಈಗಾಗಲೇ ಐದು ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ದರೋಡೆಕೋರರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು, ನವೆಂಬರ್ 22: ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದ 7.11 ಕೋಟಿ ರೂಪಾಯಿ ಎಟಿಎಂ ಹಣದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ದರೋಡೆಕೋರರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮೂಲಕ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ಕುರ್ಮಾನಿಪಲ್ಲಿಯ ನಿರ್ಜನ ಪ್ರದೇಶದ ಬಳಿ ಸಿಎಂಎಸ್ ವಾಹನದಲ್ಲಿ ಹಣ ತುಂಬಲು ಬಳಸುವ ಬಾಕ್ಸ್​ಗಳು ಪತ್ತೆಯಾಗಿವೆ. ದರೋಡೆಕೋರರು ಹಣದ ಬಾಕ್ಸ್‌ಗಳನ್ನು ಎಸೆದು ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ದರೋಡೆ ಮಾಡಿದ ಒಟ್ಟು 7.11 ಕೋಟಿ ರೂಪಾಯಿ ಹಣದಲ್ಲಿ ಒಂದು ಕೋಟಿಗೂ ಅಧಿಕ ಹಣದೊಂದಿಗೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಈಗಾಗಲೇ 5 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ದರೋಡೆ ಕೇಸ್​: ಆರೋಪಿಗಳಿಗೆ ಪೊಲೀಸರ ಶಾಕ್​, ಆಂಧ್ರದಲ್ಲಿ ಬಹುಪಾಲು ಹಣ ಸೀಜ್​

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ