ಮಾಲೀಕನಿಂದ ಫಸ್ಟ್ ಪಾರ್ಟಿಗೆ ಹೋಗಿದ್ದೇಗೆ? ಲ್ಯಾಂಬೋರ್ಗಿನಿ ಕಳ್ಳಾಟ ರಹಸ್ಯ ಬಿಚ್ಚಿಟ್ಟ ಅಧಿಕಾರಿ
ಅದು ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರು. ಅಷ್ಟೊಂದು ದುಬಾರಿ ಹಣ ಸುರಿದು ಕಾರ್ ಖರೀದಿಸಿದ್ದ ಮಾಲೀಕ ನೋಂದಣಿ ಮಾಡಿಸದೇ ಕಳ್ಳಾಟವಾಡಿದ್ದ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವರ್ಷ ನಂಬರ್ ಇಲ್ದೆ ಗಾಡಿ ಓಡಿಸಿ ಕಳ್ಳಾಟವಾಡಿದ್ದ. ಅದೇ ಕಾರು ಇಂದು (ಫೆಬ್ರವರಿ 08) ಸೀಜ್ ಆಗಿದೆ. ಲ್ಯಾಂಬೋರ್ಗಿನಿ ಉರಾಖಾನ್ ಕಾರು ಬರೋಬ್ಬರಿ 3 ಕೋಟಿ 51 ಲಕ್ಷ ರೂಪಾಯಿ ಬೆಲೆ ಬಾಳುತ್ತೆ. ಪಟ್ನಂ ಚಿರು ಹರ್ಷ ಎಂಬಾತ 2022 ರಲ್ಲಿ ಈ ಕಾರು ಖರೀದಿಸಿದ್ದು, ಹರ್ಷ ಇನ್ಪ್ರಾ construction pvt limited ಅನ್ನೋ ಕಂಪನಿ ಹೆಸರಿಗೆ ರಿಜಿಸ್ಟ್ರೇಷನ್ ಆಗಿದೆ.
ಬೆಂಗಳೂರು, (ಫೆಬ್ರವರಿ 08): ಅದು ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರು. ಅಷ್ಟೊಂದು ದುಬಾರಿ ಹಣ ಸುರಿದು ಕಾರ್ ಖರೀದಿಸಿದ್ದ ಮಾಲೀಕ ನೋಂದಣಿ ಮಾಡಿಸದೇ ಕಳ್ಳಾಟವಾಡಿದ್ದ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವರ್ಷ ನಂಬರ್ ಇಲ್ದೆ ಗಾಡಿ ಓಡಿಸಿ ಕಳ್ಳಾಟವಾಡಿದ್ದ. ಅದೇ ಕಾರು ಇಂದು (ಫೆಬ್ರವರಿ 08) ಸೀಜ್ ಆಗಿದೆ. ಲ್ಯಾಂಬೋರ್ಗಿನಿ ಉರಾಖಾನ್ ಕಾರು ಬರೋಬ್ಬರಿ 3 ಕೋಟಿ 51 ಲಕ್ಷ ರೂಪಾಯಿ ಬೆಲೆ ಬಾಳುತ್ತೆ. ಪಟ್ನಂ ಚಿರು ಹರ್ಷ ಎಂಬಾತ 2022 ರಲ್ಲಿ ಈ ಕಾರು ಖರೀದಿಸಿದ್ದು, ಹರ್ಷ ಇನ್ಪ್ರಾ construction pvt limited ಅನ್ನೋ ಕಂಪನಿ ಹೆಸರಿಗೆ ರಿಜಿಸ್ಟ್ರೇಷನ್ ಆಗಿದೆ. ತೆಲಂಗಾಣದಲ್ಲೇ ಕಾರ್‌ನ ನೋಂದಣಿ ಮಾಡಿಸುತ್ತೇವೆ ಅಂತಾ ಹೇಳಿದ್ದ ಮಾಲೀಕ, ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒದಲ್ಲಿ ತಾತ್ಕಾಲಿಕವಾಗಿ ನೋಂದಣಿ ಮಾಡಿಸಿದ್ದ. ಆದ್ರೆ ಮೂರು ವರ್ಷವಾದ್ರೂ ಪರ್ಮಮೆಂಟ್ ರಿಜಿಸ್ಟ್ರೇಷನ್ ಮಾಡಿಸಿಕೊಂಡಿಲ್ಲ. ಇದ್ರ ನಡುವೆ ಇದೇ ಕಾರನ್ನ ಹೆಚ್-1 ಕಾರ್ ಕೇರ್ ಕಂಪನಿಗೆ ಚಿರು ಮಾರಾಟ ಮಾಡಿದ್ದ.
ಇನ್ನು ಚಿರು ಅವರಿಂದ ಕಾರ್ ಖರೀದಿಸಿದ್ದ ಹೆಚ್-1 ಕಾರ್ ಕೇರ್ ಕೂಡಾ ಮೋಸದಾಟ ಮಾಡಿದೆ. ಈ ಕಾರ್‌ನ ಮಾಲೀಕ ನಾನೇ ಅನ್ನೋ ದುರುದ್ದೇಶದಿಂದ ಹೊಸ ಕಾರು ಎಂಬಂತೆ ನಕಲಿ ದಾಖಲೆ ಸೃಷ್ಟಿಸಿದೆ. 2025 ರಲ್ಲಿ ಈ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿರುವ ಹಾಗೆ ತೋರಿಸಿ ಸತತ ಮೂರು ವರ್ಷಗಳ ದಂಡವನ್ನು ಪಾವತಿಸದೆ ಕಸ್ತೂರಿ ನಗರ ಆರ್‌ಟಿಒದಲ್ಲಿ ಹೊಸದಾಗಿ ನೋಂದಣಿ ಮಾಡಿಸಿದ್ದಾರೆ. ಈ ಮೋಸದಾಟ ಗೊತ್ತಾಗ್ತಿದ್ದಂತೆ ಇಂದು ಕಾರ್ ಸೀಜ್ ಮಾಡಲಾಗಿದೆ. ಇನ್ನು ಈ ಬಗ್ಗೆ ಆರ್ಟಿಓ ಅಧಿಕಾರಿ ಇನ್ನಷ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

