ಬೆಂಗಳೂರು: ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!

Updated on: Jan 17, 2026 | 11:46 AM

ನಗರದ ಮಹದೇವಪುರದ ಬಳಗೆರೆ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ಖಂಡಿಸಿ ಐಟಿ–ಬಿಟಿ ಉದ್ಯೋಗಿಗಳು ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಹಾಳಾಗಿರುವ ರಸ್ತೆಗಳಿಂದ ನಿತ್ಯ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಟೆಕ್ಕಿಗಳು ಗುದ್ದಲಿ, ಬಾಂಡಲಿ, ಹಾರೆ ಮತ್ತು ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಟ್ರ್ಯಾಕ್ಟರ್ ತರಿಸಿ ರಸ್ತೆ ಮೇಲೆ ತುಂಬಿಕೊಂಡಿದ್ದ ಮಣ್ಣು ಹಾಗೂ ಧೂಳನ್ನು ಸ್ವಚ್ಛಗೊಳಿಸುವ ಮೂಲಕ ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಬಳಗೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ರಸ್ತೆ ಗುಂಡಿಗೆ ಬಿದ್ದು ಟೆಕ್ಕಿ ಶ್ರೀಧರ್ ಅವರಿಗೆ ಕೈ ಮುರಿದಿದ್ದ ಘಟನೆ ನಡೆದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಟೆಕ್ಕಿಗಳು ಒತ್ತಾಯಿಸಿದರು.

ಬೆಂಗಳೂರು, ಜನವರಿ 17: ನಗರದ ಮಹದೇವಪುರದ ಬಳಗೆರೆ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ಖಂಡಿಸಿ ಐಟಿ–ಬಿಟಿ ಉದ್ಯೋಗಿಗಳು ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಹಾಳಾಗಿರುವ ರಸ್ತೆಗಳಿಂದ ನಿತ್ಯ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಟೆಕ್ಕಿಗಳು ಗುದ್ದಲಿ, ಬಾಂಡಲಿ, ಹಾರೆ ಮತ್ತು ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಟ್ರ್ಯಾಕ್ಟರ್ ತರಿಸಿ ರಸ್ತೆ ಮೇಲೆ ತುಂಬಿಕೊಂಡಿದ್ದ ಮಣ್ಣು ಹಾಗೂ ಧೂಳನ್ನು ಸ್ವಚ್ಛಗೊಳಿಸುವ ಮೂಲಕ ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಬಳಗೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ರಸ್ತೆ ಗುಂಡಿಗೆ ಬಿದ್ದು ಟೆಕ್ಕಿ ಶ್ರೀಧರ್ ಅವರಿಗೆ ಕೈ ಮುರಿದಿದ್ದ ಘಟನೆ ನಡೆದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಟೆಕ್ಕಿಗಳು ಒತ್ತಾಯಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published on: Jan 17, 2026 11:46 AM