ರಸ್ತೆಯಲ್ಲಿ ಫೋನ್‌ ನೋಡ್ತಾ ಬರ್ತಿದ್ದವನ ಕೈಯಿಂದ ಮೊಬೈಲ್‌ ಕಿತ್ತು ಎಸ್ಕೇಪ್‌ ಆದ ಕಳ್ಳರು

Updated on: Sep 23, 2025 | 3:34 PM

ವಾಕಿಂಗ್‌ ಹೋಗುವಾಗ, ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಮೊಬೈಲ್‌ ನೋಡ್ಕೊಂಡು ಹೋಗುವ ಅಭ್ಯಾಸವಿದೆ. ಇದೇ ಕಾರಣದಿಂದ ಇಲ್ಲೊಬ್ಬನ ಮೊಬೈಲ್‌ ಕಳ್ಳರ ಪಾಲಾಗಿದೆ. ಹೌದು ರಾಜಾಜಿನಗರದಲ್ಲಿ ಯುವಕನೊಬ್ಬ ಮೊಬೈಲ್‌ ನೋಡ್ತಾ ರಸ್ತೆಯಲ್ಲಿ ಹೋಗ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ಕಳ್ಳರಿಬ್ಬರು ಆತನ ಕೈಯಿಂದ ಮೊಬೈಲ್‌ ಎಗರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಸೆಪ್ಟೆಂಬರ್‌ 23: ಖದೀಮ ಕಳ್ಳರು (Thieves) ರಸ್ತೆ ಬದಿ ಹೋಗುವವರ ಬ್ಯಾಗ್‌, ಚಿನ್ನದ ಸರ ಕದ್ದಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇಂತಹದ್ದೊಂದು ಘಟನೆ ಇದೀಗ ನಡೆದಿದ್ದು, ಕಳ್ಳರಿಬ್ಬರು ರಸ್ತೆಯಲ್ಲಿ ನಡ್ಕೊಂಡು ಹೋಗ್ತಿದ್ದ ಯುವಕನೊಬ್ಬನ ಮೊಬೈಲ್‌ ಫೋನನ್ನೇ ಕದ್ದು ಪರಾರಿಯಾಗಿದ್ದಾರೆ. ರಾಜಾಜಿನಗರದಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬ ರಸ್ತೆ ಬದಿ ಮೊಬೈಲ್‌ ನೋಡ್ಕೊಂಡು ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಎಂಟ್ರಿ ಕೊಟ್ಟಂತಹ ಕಳ್ಳರಿಬ್ಬರು ಆತನ ಕೈಯಿಂದ ಕ್ಷಣಾರ್ಧದಲ್ಲಿ ಮೊಬೈಲ್‌ ಕಿತ್ತು ಎಸ್ಕೇಪ್‌ ಆಗಿದ್ದಾರೆ. ಸೆಪ್ಟೆಂಬರ್‌ 17 ರಂದು ಈ ಘಟನೆ ನಡೆದಿದ್ದು, ಮೊಬೈಲ್‌ ಕದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ