ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ
ವ್ಯಕ್ತಿಯೋರ್ವ ಕಾರಿನ ಎರಡು ಡೋರ್ ಓಪನ್ ರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜನೆ ಮಾಡಿದ್ದಾನೆ. ಚಂದಾಪುರದ ಪ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ. ಚಂದಾಪುರದಿಂದ ಅತ್ತಿಬೆಲೆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್ ಉಂಟಾಗಿದ್ದರಿಂದ ಕಾರು ಚಾಲಕ ಗಂಟೆಗಟ್ಟಲೇ ಕಾದಿದ್ದಾನೆ. ಇದರಿಂದ ತಡೆದುಕೊಳ್ಳಲು ಆಗದೇ ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಬೆಂಗಳೂರು, (ಜನವರಿ 24): ಮೊದಲೇ ಬೆಂಗಳೂರು ಟ್ರಾಫಿಕ್ (Bengaluru traffic) ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದುಕೊಂಡಿದೆ. ಅದರಲ್ಲೂ ವೀಕೆಂಡ್, ಸಾಲು ಸಾಲು ರಜೆಗಳು ಇದ್ದರೆ ಸಾಕು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿರುತ್ತವೆ. ಅದರಂತೆ ಇಂದಿನಿಂದ ಸೋಮವಾರದವರೆಗೂ ರಜೆ ಇರುವುದರಿಂದ ಜನರ ಊರುಗಳತ್ತ ಮುಖ ಮಾಡುತ್ತಿದ್ದು, ಇದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ವ್ಯಕ್ತಿ ಓರ್ವ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದು, ತಡೆಯಲಾಗದೇ ರಸ್ತೆಯಲ್ಲೇ ಮೂತ್ರ (urine) ವಿಸರ್ಜನೆ ಮಾಡಿರುವ ಪ್ರಸಂಗ ನಡೆದಿದೆ.
ಹೌದು…ವ್ಯಕ್ತಿಯೋರ್ವ ಕಾರಿನ ಎರಡು ಡೋರ್ ಓಪನ್ ರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜನೆ ಮಾಡಿದ್ದಾನೆ. ಚಂದಾಪುರದ ಪ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ. ಚಂದಾಪುರದಿಂದ ಅತ್ತಿಬೆಲೆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್ ಉಂಟಾಗಿದ್ದರಿಂದ ಕಾರು ಚಾಲಕ ಗಂಟೆಗಟ್ಟಲೇ ಕಾದಿದ್ದಾನೆ. ಇದರಿಂದ ತಡೆದುಕೊಳ್ಳಲು ಆಗದೇ ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.