AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ನಯಾ ಪ್ಲ್ಯಾನ್: ಏನದು?

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ನಯಾ ಪ್ಲ್ಯಾನ್: ಏನದು?

ಗಂಗಾಧರ​ ಬ. ಸಾಬೋಜಿ
|

Updated on: Jan 24, 2026 | 5:09 PM

Share

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸರು ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಟಾಮ್‌ಟಾಮ್ ವರದಿಯ ಪ್ರಕಾರ ಟ್ರಾಫಿಕ್‌ನಲ್ಲಿ ಬೆಂಗಳೂರು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಕೆ.ಆರ್. ಪುರಂ - ಇಬ್ಬಲೂರು ಮಾರ್ಗದಲ್ಲಿನ ಕಂಪನಿಗಳ ಉದ್ಯೋಗಿಗಳು, ಡೆಲಿವರಿ ವಾಹನಗಳು ಮತ್ತು ರಸ್ತೆ ಅಗೆತದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಸಾರ್ವಜನಿಕ ಸಾರಿಗೆ ಉತ್ತೇಜನಕ್ಕೆ ಒತ್ತು ನೀಡಲಾಗುತ್ತಿದೆ.

ಬೆಂಗಳೂರು, ಜನವರಿ 24: ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಟಾಮ್‌ಟಾಮ್ ವರದಿ ಬೆನ್ನಲ್ಲೇ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಪೊಲೀಸರು ಹೊಸ ಪ್ಲ್ಯಾನ್​​ಗೆ ಮುಂದಾಗಿದ್ದಾರೆ. ಪ್ರಮುಖವಾಗಿ ಕೆ.ಆರ್. ಪುರಂನಿಂದ ಇಬ್ಬಲೂರುವರೆಗಿನ 17 ಕಿ.ಮೀ ವ್ಯಾಪ್ತಿಯಲ್ಲಿರುವ ಸುಮಾರು 500 ಕಂಪನಿಗಳಲ್ಲಿ ಕೆಲಸ ಮಾಡುವ 12 ಲಕ್ಷ ಉದ್ಯೋಗಿಗಳ ಓಡಾಟವನ್ನು ಸಾರ್ವಜನಿಕ ಸಾರಿಗೆಯತ್ತ ತಿರುಗಿಸುವ ಕುರಿತು ಸಭೆ ನಡೆದಿದೆ. ಅಲ್ಲದೆ, ಪೀಕ್ ಅವರ್‌ನಲ್ಲಿ ಓಡಾಡುವ ಸುಮಾರು 35-40 ಸಾವಿರ ಡೆಲಿವರಿ ವಾಹನಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಗುರುತಿಸಲು ಗೂಗಲ್ ಜೊತೆ ಚರ್ಚಿಸುವ ಆಲೋಚನೆಯೂ ಇದೆ. ರಸ್ತೆ ಅಗೆತದಂತಹ ಮೂಲಭೂತ ಸಮಸ್ಯೆಗಳ ಮೇಲೂ ಗಮನ ಹರಿಸಲು ಸಂಚಾರ ವಿಭಾಗ ಮುಂದಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.