ರಾಜ್ಯಪಾಲರಿಗೂ ತಟ್ಟಿದ ಟ್ರಾಫಿಕ್ ಬಿಸಿ; ಸಂಚಾರ ಸುಗಮಗೊಳಿಸಲು ಖುದ್ದು ಫೀಲ್ಡಿಗಿಳಿದ ಎಸ್ಪಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 29, 2024 | 9:44 PM

ದಿನನಿತ್ಯ ಮಹಾನಗರಕ್ಕೆ ಲಕ್ಷಾಂತರ ಮಂದಿ ಲಗ್ಗೆ ಇಡುತ್ತಾರೆ. ಈ ಹಿನ್ನಲೆ ಸಿಲಿಕಾನ್​ ಸಿಟಿ ಮಂದಿಗೆ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಅದರಂತೆ ಇಂದು(ಫೆ.29) ರಾಜ್ಯಪಾಲರಿಗೂ ಟ್ರಾಫಿಕ್ ಬಿಸಿ ತಟ್ಟಿದ್ದು, ರಾಯಚೂರಿನಿಂದ ಬೆಂಗಳೂರಿಗೆ ರಸ್ತೆ ಮೂಲಕ ತೆರಳುವಾಗ ರಾಷ್ಟ್ರೀಯ ಹೆದ್ದಾರಿ 4, ನೆಲಮಂಗಲ ನವಯುಗ ಟೋಲ್ ಬಳಿ ಫುಲ್​ ಟ್ರಾಫಿಕ್ ಉಂಟಾಗಿದೆ.

ಬೆಂಗಳೂರು ಗ್ರಾಮಾಂತರ, ಫೆ.29: ರಾಜ್ಯ ರಾಜಧಾನಿ ಬೆಂಗಳೂರು, ಟ್ರಾಫಿಕ್​ ಸಮಸ್ಯೆಗೂ ಹೆಸರುವಾಸಿಯಾಗಿದೆ. ದಿನನಿತ್ಯ ಮಹಾನಗರಕ್ಕೆ ಲಕ್ಷಾಂತರ ಮಂದಿ ಲಗ್ಗೆ ಇಡುತ್ತಾರೆ. ಈ ಹಿನ್ನಲೆ ಸಿಲಿಕಾನ್​ ಸಿಟಿ ಮಂದಿಗೆ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಅದರಂತೆ ಇಂದು(ಫೆ.29) ರಾಜ್ಯಪಾಲರಿಗೂ ಟ್ರಾಫಿಕ್ ಬಿಸಿ ತಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ4 ನೆಲಮಂಗಲ ನವಯುಗ ಟೋಲ್ ಬಳಿ ಫುಲ್​ ಟ್ರಾಫಿಕ್ ಉಂಟಾಗಿದೆ. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರೇ ಖುದ್ದು ಫೀಲ್ಡಿಗಿಳಿದು ಸಂಚಾರವನ್ನು ಸುಗಮಗೊಳಿಸಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌( Thawar Chand Gehlot) ಅವರು ರಾಯಚೂರಿನಿಂದ ಬೆಂಗಳೂರಿಗೆ ರಸ್ತೆ ಮೂಲಕ ತೆರಳುವಾಗ ಈ ಘಟನೆ ನಡೆದಿದ್ದು, ರಾಜ್ಯಪಾಲರ ಕಾರಿನ ಜೋತೆ
ಹತ್ತಾರು ಪೊಲೀಸ್ ವಾಹನಗಳು ಹೆದ್ದಾರಿಯಲ್ಲಿ ಹರಸಾಹಸ ಪಟ್ಟು ಸಾಗಿದ್ದಾವೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ