Video: ವಿಚ್ಛೇದನ ನೋಟಿಸ್ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಪತಿ, ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಬೆಂಗಳೂರಿನ ಬಸವೇಶ್ವರ ನಗರ ಮುಖ್ಯರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ವಿಚ್ಛೇದನ ನೋಟಿಸ್ ನೀಡಿದ್ದರಿಂದ ಕುಪಿತಗೊಂಡ ಬಾಲಮುರುಗನ್, ಭುವನೇಶ್ವರಿ ಅವರ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದಾನೆ. ಘಟನೆ ಸಂಜೆ 6:45ರ ಸುಮಾರಿಗೆ ನಡೆದಿದ್ದು, ಪ್ರತ್ಯಕ್ಷದರ್ಶಿ ದೇವರಾಜ್ ಘಟನೆಯ ವಿವರ ನೀಡಿದ್ದಾರೆ.
ಬೆಂಗಳೂರು, ಡಿ.24: ಬೆಂಗಳೂರಿನ ಬಸವೇಶ್ವರ ನಗರ ಮುಖ್ಯರಸ್ತೆಯಲ್ಲಿ ನಿನ್ನೆ ಸಂಜೆ ನಡೆದ ಭೀಕರ ಘಟನೆಯಲ್ಲಿ ಪತಿ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಪತ್ನಿ ನೀಡಿದ್ದ ವಿಚ್ಛೇದನ ನೋಟಿಸ್ ಕಾರಣ ಎನ್ನಲಾಗಿದೆ. ಬಾಲಮುರುಗನ್ ಎಂಬಾತ ತನ್ನ ಪತ್ನಿ ಭುವನೇಶ್ವರಿ (39) ಅವರ ಮೇಲೆ ಐದು ಬಾರಿ ಗುಂಡು ಹಾರಿಸಿ ಕೊಲೆಗೈದಿದ್ದಾನೆ. ಪ್ರತ್ಯಕ್ಷದರ್ಶಿ ದೇವರಾಜ್ ಅವರ ಹೇಳಿರುವ ಪ್ರಕಾರ, ಸಂಜೆ 6:45 ರಿಂದ 7:00 ಗಂಟೆ ಸುಮಾರಿಗೆ ಡಬ್ ಡಬ್ ಎಂಬ ಶಬ್ದ ಕೇಳಿಸಿತು. ಸ್ಥಳಕ್ಕೆ ಬಂದು ನೋಡಿದಾಗ ಮಹಿಳೆಯೊಬ್ಬರು ಕೆಳಗೆ ಬಿದ್ದಿದ್ದರು. ಅವರ ದೇಹಕ್ಕೆ ನಾಲ್ಕು ಗುಂಡುಗಳು ತಗುಲಿದ್ದವು, ಅದರಲ್ಲಿ ಒಂದು ತಲೆಗೆ ಮತ್ತು ಎರಡು ಕೈಗಳಿಗೆ ತಗುಲಿದ್ದವು. ಗಾಯಗೊಂಡ ಭುವನೇಶ್ವರಿ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿ ಬಾಲಮುರುಗನ್ ಸ್ಥಳದಿಂದ ಪರಾರಿಯಾಗಿದ್ದ, ನಂತರ ಮಾಗಡಿ ರಸ್ತೆ ಪೊಲೀಸರ ಎದುರು ಶರಣಾಗಿದ್ದಾನೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
