ಎಣ್ಣೆ ಹೊಡೆಯುತ್ತಾ ತ್ರಿಬಲ್​ ರೈಡಿಂಗ್​: ಬೆಂಗಳೂರಿನಲ್ಲಿ ಯುವಕರ ಜಾಲಿ ರೈಡ್​​ ​​

| Updated By: ವಿವೇಕ ಬಿರಾದಾರ

Updated on: Aug 07, 2024 | 10:04 AM

ಸಂಚಾರಿ ನಿಯಮ ಪಾಲಿಸಿ ಅಂತ ಬೆಂಗಳೂರು ನಗರ ಪೊಲೀಸರು ಎಷ್ಟೇ ಅರಿವು ಮೂಡಿಸಿದರೂ ಕೆಲ ಯುವಕರು ಸೂಚನೆಗಳನ್ನು ಗಾಳಿಗೆ ತೂರಿದ್ದಾರೆ. ತ್ರಿಬಲ್​ ರೈಡಿಂಗ್​ನಲ್ಲಿ​ ಮದ್ಯ ಸೇವಿಸುತ್ತಾ, ಅಡ್ಡಾದಿಡ್ಡಿ ಬೈಕ್​​ ಓಡಿಸಿ ಯುವಕರು ನಡುರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪುಂಡರ ಅಟ್ಟಹಾಸ ಮಿತಿ ಮೀರಿದೆ. ಬೆಂಗಳೂರು ನಗರ ಪೊಲೀಸರು ಎಷ್ಟೇ ಬಿಗಿ ಕ್ರಮಗಳನ್ನು ಕೈಗೊಂಡರೂ, ಪುಂಡರು ಮಾತ್ರ ತಮ್ಮ ಆಟೋಟಪಗಳನ್ನು ನಿಲ್ಲಿಸುತ್ತಿಲ್ಲ. ಕಬ್ಬನ್ ಪಾರ್ಕ್ ಪೊಲೀಸ್​ ಠಾಣಾ ವ್ಯಾಪ್ತಿಯ ಎಂಜಿ ರಸ್ತೆ ಬಳಿ ಯುವಕರು ತ್ರಿಬಲ್​ ರೈಡ್ಸ್​​​ ಹೋಗಿದ್ದಾರೆ. ಚಲಿಸುವ ಬೈಕ್​ನಲ್ಲಿ ಓರ್ವ ಯುವಕ ಮದ್ಯ ಇರುವ ಗ್ಲಾಸ್ ಮತ್ತೊಬ್ಬ ಬಿಯರ್​ ಬಾಟಲ್​​​ ಹಿಡಿದು ಮದ್ಯ ಸೇವಿಸಿದ್ದಾರೆ. ಯುವಕರು ಕುಡಿದ ನಶೆಯಲ್ಲಿ ಹಲ್ಮೇಟ್​ ಹಾಕದೆ, ತ್ರಿಬಲ್​ ರೈಡ್ಸ್​​ ಹೋಗಿದ್ದಲ್ಲದೆ ರಸ್ತೆಯಲ್ಲಿ ಬೈಕ್​​ನನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಲಾಗಿದೆ. ಚಲಿಸುವ ಬೈಕ್​ನಲ್ಲಿ ಎಣ್ಣೆ ಹೊಡೆಯುತ್ತಾ ಜಾಲಿ ರೈಡ್ ಮಾಡಿದ್ದಾರೆ. ಪುಂಡರ ಅಟ್ಟಹಾಸ ಬೈಕ್ ಹಿಂದೆ ಹೊರಟಿದ್ದ ಕಾರು ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮಧ್ಯರಾತ್ರಿ 1ಗಂಟೆ ವರೆಗೂ ಮದ್ಯ ಮಾರಾಟಕ್ಕೆ ಅವಕಾಶ, ಆದರೆ ಈ ವ್ಯಾಪ್ತಿಯಲ್ಲಿ ಮಾತ್ರ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ