ಜನರ ರಕ್ಷಣೆ ಮಾಡುವ ಪೊಲೀಸರಿಗೇ ಇಲ್ಲಾ ರಕ್ಷಣೆ: ಇದೆಂಥಾ ಸ್ಟೇಷನ್?
ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯ ಕಟ್ಟಡವು 40 ವರ್ಷಗಳಿಗಿಂತಲೂ ಹಳೆಯದ್ದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಈ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಠಾಣೆಯು ಕುಸಿಯುವ ಹಂತದಲ್ಲಿದ್ದು, ಸಾರ್ವಜನಿಕರು ಹಾಗೂ ಪೊಲೀಸರು ಒಳಗೆ ಪ್ರವೇಶಿಸಲು ಭಯಪಡುವಂತಾಗಿದೆ. ಸಾರ್ವಜನಿಕರ ಜೀವಕ್ಕೆ ಸುರಕ್ಷತೆ ಒದಗಿಸುವಂತೆ ಆಗ್ರಹ ಕೇಳಿಬಂದಿದೆ. ವಿಡಿಯೋ ನೋಡಿ.
ಬೆಂಗಳೂರು, ನವೆಂಬರ್ 23: ಗಿರಿನಗರ ಪೊಲೀಸ್ ಠಾಣೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಸಾರ್ವಜನಿಕರು ಮಾತ್ರವಲ್ಲದೆ ಪೊಲೀಸರು ಕೂಡ ಸ್ಟೇಷನ್ ಒಳಗೆ ಕಾಲಿಡುವುದಕ್ಕೆ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಠಾಣೆ 40 ವರ್ಷಗಳಿಗಿಂತಲೂ ಹಳೆಯದಾಗಿದೆ. ಕಿಟಕಿಗಳು, ಗೋಡೆಗಳು, ಗಾಜುಗಳು ಒಡೆದುಹೋಗಿದ್ದು, ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ.
ಲಕ್ಷ್ಮೀನರಸಿಂಹ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 23, 2025 06:18 PM
