Viral Video: ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ; ಈ ಮಗು ಬದುಕುಳಿದಿದ್ದೇ ಪವಾಡ

Updated on: Feb 02, 2026 | 4:55 PM

ಒಂದುವೇಳೆ ಒಂದೆರಡು ಸೆಕೆಂಡ್ ಮಕ್ಕಳ ಬಗ್ಗೆ ಗಮನ ಕೊಡದೇ ಇದ್ದರೂ ಅವರ ಜೀವಕ್ಕೇ ಅಪಾಯ ಉಂಟಾದೀತು. ಕೇರಳದ ಕೋಝಿಕೋಡ್​​ನಲ್ಲಿ ಚಿಕ್ಕ ಹೆಣ್ಣುಮಗುವೊಂದು ರಸ್ತೆಗೆ ಓಡಿಬಂದಾಗಲೇ ಬಸ್​ ಅಡ್ಡಬಂದಿದೆ. ದೇವರ ಕೃಪೆಯಿಂದ ಆ ಬಸ್​ ಆ ಮಗುವಿಗೆ ಡಿಕ್ಕಿ ಹೊಡೆದಿಲ್ಲ. ಅಷ್ಟರಲ್ಲಿ ಆ ಮಗು ಹೆದರಿ ವಾಪಾಸ್ ಓಡಿದೆ. ಆ ವೇಳೆಗೆ ಬೇರೆ ಯಾವುದಾದರೂ ವಾಹನ ಬಂದಿದ್ದರೂ ಆ ಮಗುವಿಗೆ ಡಿಕ್ಕಿ ಹೊಡೆಯುತ್ತಿತ್ತು. ಆದರೆ, ಅದೃಷ್ಟವಶಾತ್ ಆ ರೀತಿ ಯಾವ ವಾಹನಗಳೂ ಬಾರದ ಕಾರಣದಿಂದ ಆ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಕೋಝಿಕೋಡ್, ಫೆಬ್ರವರಿ 2: ಎಲ್ಲ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಒಂದುವೇಳೆ ಒಂದೆರಡು ಸೆಕೆಂಡ್ ಮಕ್ಕಳ ಬಗ್ಗೆ ಗಮನ ಕೊಡದೇ ಇದ್ದರೂ ಅವರ ಜೀವಕ್ಕೇ ಅಪಾಯ ಉಂಟಾದೀತು. ಕೇರಳದ (Kerala)  ಕೋಝಿಕೋಡ್​​ನಲ್ಲಿ ಚಿಕ್ಕ ಹೆಣ್ಣುಮಗುವೊಂದು ರಸ್ತೆಗೆ ಓಡಿಬಂದಾಗಲೇ ಬಸ್​ ಅಡ್ಡಬಂದಿದೆ. ದೇವರ ಕೃಪೆಯಿಂದ ಆ ಬಸ್​ ಆ ಮಗುವಿಗೆ ಡಿಕ್ಕಿ ಹೊಡೆದಿಲ್ಲ. ಅಷ್ಟರಲ್ಲಿ ಆ ಮಗು ಹೆದರಿ ವಾಪಾಸ್ ಓಡಿದೆ. ಆ ವೇಳೆಗೆ ಬೇರೆ ಯಾವುದಾದರೂ ವಾಹನ ಬಂದಿದ್ದರೂ ಆ ಮಗುವಿಗೆ ಡಿಕ್ಕಿ ಹೊಡೆಯುತ್ತಿತ್ತು. ಆದರೆ, ಅದೃಷ್ಟವಶಾತ್ ಆ ರೀತಿ ಯಾವ ವಾಹನಗಳೂ ಬಾರದ ಕಾರಣದಿಂದ ಆ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಹೀಗಾಗಿ, ಮಗುವನ್ನು ಒಂಟಿಯಾಗಿ ಬಿಡುವ ಮುನ್ನ ಎಚ್ಚರವಿರಲಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More