Assembly Polls: ಹಾಸನ ವಿಧಾನಸಭಾ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ ಸ್ಪರ್ಧಿಸುವ ಸಾಧ್ಯತೆ, ಕ್ಷೇತ್ರದಲ್ಲಿ ಸಕ್ರಿಯರಾದ ಭವಾನಿ ರೇವಣ್ಣ

|

Updated on: Feb 10, 2023 | 11:09 AM

ರೇವಣ್ಣ ಸ್ಪರ್ಧಿಸುವುದೇ ನಿಜವಾದರೆ, ದೊಡ್ಡಗೌಡರ ಕುಟುಂಬ ಹಾಸನ ಶಾಸಕ ಪ್ರೀತಂಗೌಡ ಅವರೆಸದ ಸವಾಲನ್ನು ಸ್ವೀಕರಿಸಿದಂತಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಭವಾನಿ ಕ್ಷೇತ್ರದಲ್ಲಿ ಸುತ್ತುತ್ತಾ, ಕಾರ್ಯಕರ್ತರನ್ನು ಬೇಟಿ ಮಾಡುತ್ತಾ ಸಕ್ರಿಯರಾಗಿಬಿಟ್ಟಿದ್ದಾರೆ.

ಹಾಸನ: ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳ ಕತೆ ಒಂದಾದರೆ ಹಾಸನ ಕ್ಷೇತ್ರದ ಕತೆ ಮತ್ತೊಂದು. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಭವಾನಿ ರೇವಣ್ಣ (Bhavani Revanna) ಅವರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಅವರ ಪತಿ ಹೆಚ್ ಡಿ ರೇವಣ್ಣ (HD Revanna) ಹೊಳೆನರಸೀಪುರದ ಜೊತೆ ಹಾಸನ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುವ ಸೂಚನೆಗಳು ದಟ್ಟವಾಗುತ್ತಿವೆ. ರೇವಣ್ಣ ಸ್ಪರ್ಧಿಸುವುದೇ ನಿಜವಾದರೆ, ದೊಡ್ಡಗೌಡರ ಕುಟುಂಬ ಹಾಸನ ಶಾಸಕ ಪ್ರೀತಂಗೌಡ ಅವರೆಸದ ಸವಾಲನ್ನು ಸ್ವೀಕರಿಸಿದಂತಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಭವಾನಿ ಕ್ಷೇತ್ರದಲ್ಲಿ ಸುತ್ತುತ್ತಾ, ಕಾರ್ಯಕರ್ತರನ್ನು ಬೇಟಿ ಮಾಡುತ್ತಾ ಸಕ್ರಿಯರಾಗಿಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ