ಬೀದರ್‌ನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಬೀದರ್‌ನ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರವು 2024ನೇ ಸಾಲಿನ ರಾಷ್ಟ್ರಮಟ್ಟದ ಜಾನುವಾರು ತಳಿ ಸಂರಕ್ಷಣೆ ಪ್ರಶಸ್ತಿಯನ್ನು ದೇವಣಿ ತಳಿ ಸಂರಕ್ಷಣೆಗಾಗಿ ಪಡೆದುಕೊಂಡಿದೆ. ಹರಿಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ.ವಿ. ಶಿವಪ್ರಕಾಶ್ ಮತ್ತು ಡಾ. ಪ್ರಕಾಶ್ ಕುಮಾರ ರಾಠೋಡ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳು ಈ ಸಾಧನೆಯನ್ನು ಅಭಿನಂದಿಸಿದ್ದಾರೆ.
2024ನೇ ಸಾಲಿನ ರಾಷ್ಟ್ರಮಟ್ಟದ ಜಾನುವಾರು ತಳಿ ಸಂರಕ್ಷಣೆ ಪ್ರಶಸ್ತಿಯನ್ನು ಬೀದರ್‌ನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ಮುಡಿಗೇರಿಸಿಕೊಂಡಿದೆ. ದೇವಣಿ ತಳಿ ಸಂರಕ್ಷಣೆಗಾಗಿ ಪಡೆದುಕೊಂಡಿದೆ. ರಾಷ್ಟ್ರೀಯ ಕೃಷಿಕರ ದಿನದ ಅಂಗವಾಗಿ ಹರಿಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ್ ಹಾಗೂ ಕೇಂದ್ರದ ಮುಖ್ಯಸ್ಥ ಡಾ.ಪ್ರಕಾಶ್‌ಕುಮಾರ ರಾಠೋಡ ಅವ್ರು ಪ್ರಶಸ್ತಿ ಸ್ವೀಕರಿಸಿದ್ದಾರೆ. “ದೇವಣಿ ತಳಿ ಸಂರಕ್ಷಣೆಗಾಗಿ” ಬೀದರ್‌ನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರಕ್ಕೆ ರಾಷ್ತ್ರೀಯ ಜಾನುವಾರು ತಳಿ ಸಂರಕ್ಷಣೆ ಪ್ರಶಸ್ತಿ ದೊರೆತಿದೆ ಅಂತ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಕೆ.ಸಿ.ವೀರಣ್ಣ ತಿಳಿಸಿದ್ದಾರೆ. ಅಲ್ಲದೇ, ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸೇವೆಗೈದು ಪ್ರಶಸ್ತಿಯನ್ನು ಪಡೆಯಲು ಕಾರಣರಾದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನ ಅಭಿನಂದಿಸಿದ್ದಾರೆ.
Loading...
Unable to load recommendations.
Follow Us