ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಬೀದರ್‌ನ ವಿಶಾಲ್ ಮೈತ್ರೆ ಸಹಿತ ಏಳು ಜನರ ವಿರುದ್ಧ FIR

Edited By:

Updated on: Oct 05, 2026 | 7:55 AM

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಭಾಲ್ಕಿಯ ವಿಶಾಲ್ ಮೈತ್ರೆಯನ್ನು ತೀವ್ರವಾಗಿ ತನಿಖೆಗೆ ಒಳಪಡಿಸಲಾಗಿದೆ. ವಿಶಾಲ್ ಮೈತ್ರೆ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್‌ಐಆರ್ ಆಗಿದ್ದು, ಖಡಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಪಾಕಿಸ್ತಾನದ ಶಹಜಾದ್ ಭಟ್ಟಿ, ನೋಮಿ ಖಾನ್, ರಾನಾ ಹುನೈನ್, ಉತ್ತರ ಪ್ರದೇಶದ ಅಶು ಶರ್ಮ ಮತ್ತು ರಾಜೀವ್ ಹಾಗೂ ಬೀದರ್‌ನ ವಿಶಾಲ್ ಮೈತ್ರೆ ಸೇರಿದಂತೆ ಏಳು ಜನರನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದೆ.

ಬೀದರ್​​, ಅಕ್ಟೋಬರ್​​ 05: ಉಗ್ರರ ಜೊತೆ ನಂಟು ಹೊಂದಿದ್ದ ಆರೋಪಿತ ಯುವಕ ಬೀದರ್​ ಜಿಲ್ಲೆ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ವಿಶಾಲ್​ ಮೇತ್ರೆ ಸೇರಿದಂತೆ 7 ಜನರ ವಿರುದ್ಧ FIR ದಾಖಲಾಗಿದೆ. FIRನಲ್ಲಿ ವಿಶಾಲ್​​ ಮೇತ್ರೆ ಕುರಿತು ಹಲವು ಸ್ಫೋಟಕ ಅಂಶ ಉಲ್ಲೇಖಿಸಲಾಗಿದ್ದು, ಪಾಕಿಸ್ತಾನ ಮೂಲದ ಉಗ್ರರ ಜಾಲದ ಜೊತೆ ವಿಶಾಲ್ ಮೇತ್ರೆ ನಂಟಿನ ಬಗ್ಗೆಯೂ ಮಾಹಿತಿ ಸಿಕ್ಕಿದೆ. ವಾಟ್ಸ್​​ಆ್ಯಪ್​​​, ಇನ್​​ಸ್ಟಾಗ್ರಾಮ್​​​​ ಮೂಲಕ ಪಾಕ್ ಮೂಲದ ಶಹಜಾದ್ ಭಟ್ಟಿ ರಾಣಾ ಹುನೇನ್ ಜೊತೆ ವಿಶಾಲ್​ ಮೇತ್ರೆ ಸಂಪರ್ಕ ಹೊಂದಿದ್ದ. ಅಕ್ರಮಶಸ್ತ್ರಾಸ್ತ್ರ ಖರೀದಿ,ಸಾಗಣೆ ಕುರಿತು ಚರ್ಚಿಸಿದ್ದ ಎಂಬ ಬಗ್ಗೆ ಎಫ್​​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ. 2025 ಡಿಸೆಂಬರ್​ನಿಂದಲೇ ದೇಶವಿರೋಧಿ ಚಟುವಟಿಕೆಯಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಪಾಕ್​​​​ ಮೂಲದ ಶಹಜಾದ್ ಭಟ್ಟಿ ನೋಮಿ ಖಾನ್ ರಾನಾ ಹುನೈನ, ಯುಪಿ ಮೂಲದ ಅಶು ಶರ್ಮಾ, ಮಧ್ಯಪ್ರದೇಶದ ರಾಜೀವ್ ಭಾಯ್​ ಸೇರಿ ಏಳು ಆರೋಪಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Oct 05, 2026 07:53 AM
Loading...
Unable to load recommendations.
Follow Us
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More