ಗದಗದಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ ಆರಂಭ; ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್

Updated on: Oct 25, 2025 | 1:25 PM

ಟಿವಿ9 ವರದಿಗಳ ಪರಿಣಾಮವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೀದಿ ನಾಯಿಗಳ ವಿರುದ್ಧ ಬಿಗ್ ಇಂಪ್ಯಾಕ್ಟ್ ಆಪರೇಷನ್ ಆರಂಭಗೊಂಡಿದೆ. ಕಳೆದ ಒಂದು ತಿಂಗಳಲ್ಲಿ ಇಬ್ಬರು ಮಕ್ಕಳ ಮೇಲೆ ಹಾಗೂ ಆರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ನಾಯಿಗಳ ದಾಳಿ ನಡೆದಿತ್ತು. ಇದರಿಂದ ಭೀತಿಗೊಳಗಾದ ಜನರು ಮನೆಬಿಟ್ಟು ಹೊರಬರಲು ಹೆದರುತ್ತಿದ್ದರು. ನಗರಸಭೆ ನಿರ್ಲಕ್ಷ್ಯ ಕುರಿತು ಟಿವಿ9 ನಿರಂತರವಾಗಿ ವರದಿ ಮಾಡುತ್ತಿದ್ದ ಹಿನ್ನೆಲೆ, ಇಂದು ಬೆಟಗೇರಿ ಭಾಗದ ಕುರಹಟ್ಟಿ ಪೇಟೆಯಲ್ಲಿ ಉತ್ತರ ಪ್ರದೇಶ ಮೂಲದ ತಂಡದಿಂದ ನಾಯಿಗಳ ಪತ್ತೆ ಮತ್ತು ನಿಯಂತ್ರಣ ಕಾರ್ಯಾಚರಣೆ ಪ್ರಾರಂಭಗೊಂಡಿದೆ.

ಗದಗ, ಅಕ್ಟೋಬರ್ 25: ಟಿವಿ9 ವರದಿಗಳ ಪರಿಣಾಮವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೀದಿ ನಾಯಿಗಳ ವಿರುದ್ಧ ಬಿಗ್ ಇಂಪ್ಯಾಕ್ಟ್ ಆಪರೇಷನ್ ಆರಂಭಗೊಂಡಿದೆ. ಕಳೆದ ಒಂದು ತಿಂಗಳಲ್ಲಿ ಇಬ್ಬರು ಮಕ್ಕಳ ಮೇಲೆ ಹಾಗೂ ಆರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ನಾಯಿಗಳ ದಾಳಿ ನಡೆದಿತ್ತು. ಇದರಿಂದ ಭೀತಿಗೊಳಗಾದ ಜನರು ಮನೆಬಿಟ್ಟು ಹೊರಬರಲು ಹೆದರುತ್ತಿದ್ದರು. ನಗರಸಭೆ ನಿರ್ಲಕ್ಷ್ಯ ಕುರಿತು ಟಿವಿ9 ನಿರಂತರವಾಗಿ ವರದಿ ಮಾಡುತ್ತಿದ್ದ ಹಿನ್ನೆಲೆ, ಇಂದು ಬೆಟಗೇರಿ ಭಾಗದ ಕುರಹಟ್ಟಿ ಪೇಟೆಯಲ್ಲಿ ಉತ್ತರ ಪ್ರದೇಶ ಮೂಲದ ತಂಡದಿಂದ ನಾಯಿಗಳ ಪತ್ತೆ ಮತ್ತು ನಿಯಂತ್ರಣ ಕಾರ್ಯಾಚರಣೆ ಪ್ರಾರಂಭಗೊಂಡಿದೆ. ನಗರಸಭೆ ಆಡಳಿತ ಎಚ್ಚರಗೊಂಡಿರುವುದಕ್ಕೆ ಸ್ಥಳೀಯರು ಟಿವಿ9 ವರದಿಯನ್ನು ಶ್ಲಾಘಿಸಿ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.