ವಿಡಿಯೋ ನೋಡಿ: ಅಲ್ಲೂರಿ ಜಿಲ್ಲೆಯಲ್ಲಿ ಅದ್ಭುತ, ನದಿಯಲ್ಲಿ ಕೊಚ್ಚಿ ಬಂದ ಆಂಜನೇಯ ಸ್ವಾಮಿ ವಿಗ್ರಹ!

ವಿಡಿಯೋ ನೋಡಿ: ಅಲ್ಲೂರಿ ಜಿಲ್ಲೆಯಲ್ಲಿ ಅದ್ಭುತ, ನದಿಯಲ್ಲಿ ಕೊಚ್ಚಿ ಬಂದ ಆಂಜನೇಯ ಸ್ವಾಮಿ ವಿಗ್ರಹ!

ಸಾಧು ಶ್ರೀನಾಥ್​
|

Updated on:Oct 04, 2024 | 2:06 PM

Alluri Sitaramaraju district Anjaneya Swamy: ಆಂಧ್ರ ಪ್ರದೇಶದ ಐತಿಹಾಸಿಕ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಾಜವೊಮ್ಮಂಗಿ ಮಂಡಲದಲ್ಲಿ ಅಪರೂಪದ ಘಟನೆ ನಡೆದಿದೆ. ಜಡ್ಡಂಗಿ ಗ್ರಾಮದ ಹೊರವಲಯದ ಮದೇರು ನದಿಯ ಹೊಳೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ತೇಲಿಬಂದಿದೆ.

ಆಂಧ್ರ ಪ್ರದೇಶದ ಐತಿಹಾಸಿಕ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಾಜವೊಮ್ಮಂಗಿ ಮಂಡಲದಲ್ಲಿ ಅಪರೂಪದ ಘಟನೆ ನಡೆದಿದೆ. ಜಡ್ಡಂಗಿ ಗ್ರಾಮದ ಹೊರವಲಯದ ಮದೇರು ನದಿಯ ಹೊಳೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ತೇಲಿಬಂದಿದೆ. ಅದೇ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ಅಜಯ್ ಎಂಬ ಯುವಕ ಪ್ರತಿಮೆಯನ್ನು ಕಂಡು ಹೌಹಾರಿದ್ದಾನೆ.

ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬಂದು ಸಮೀಪದ ರಾಮಮಂದಿರಕ್ಕೆ ತೆಗೆದುಕೊಂಡುಹೋಗಿದ್ದಾರೆ. ಬಳಿಕ ಗ್ರಾಮಸ್ಥರು ಆಂಜನೇಯ ಸ್ವಾಮಿ ವಿಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 04, 2024 11:48 AM