ಬೆಳಗಾವಿ: ಕಾರ್​ ಮೇಲೆ ಉರುಳಿ ಬಿದ್ದ ಭಾರೀ ಗಾತ್ರದ ಮರ, ದೂಷಣೆ ಧಾರಾಕಾರವಾಗಿ ಸುರಿದ ಮಳೆಗೆ

ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2025 | 8:03 PM

ಕಾರಿನ ಮೇಲೆ ಉರುಳಿ ಬಿದ್ದ ಮರವನ್ನು ತೆಗೆಯಲು ಮಷೀನ್ ಚಾಲಿತ ಗರಗಸವನ್ನು ಉಪಯೋಗಿಸಲಾಗುತ್ತಿದೆ. ಮರ ನಿಸ್ಸಂದೇಹವಾಗಿ ಭಾರಿ ಗಾತ್ರದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಕಾರಿನ ಸ್ಥಿತಿ ನೋಡಿ ಅಯ್ಯೋ ಅನಿಸುತ್ತದೆ. ಕಾರಿನ ಮಾಲೀಕರಿಗಾದರೂ ಹೀಗೆ ಸಂಭವಿಸಬಹುದು ಅನ್ನೋದು ಹೇಗೆ ಗೊತ್ತಾದೀತು. ಅವರು ಅಪಾಯಕ್ಕೀಡಾಗುದಿರುವುದೇ ದೊಡ್ಡ ಸಂಗತಿ.

ಬೆಳಗಾವಿ, ಜೂನ್ 18: ಮಳೆಗಾಲದಲ್ಲಿ ಭಾರೀ ಮಳೆಗೆ ಭಾರೀ ಗಾತ್ರದ ಮರಗಳು ಉರುಳಿ ವಾಹನಗಳ ಮೇಲೆ ಬೀಳುವುದು ಅದನ್ನು ಜಖಂಗೊಳಿಸುವುದು ಕೇವಲ ಬೆಂಗಳೂರಲ್ಲಿ (Bengaluru) ನಡೆಯುವ ವಿದ್ಯಮಾನವೇನೂ ಅಲ್ಲ, ಬೆಳಗಾವಿಯಲ್ಲೂ ನಡೆಯುತ್ತವೆ. ಇಲ್ಲಿ ನೋಡಿ, ನಗರದ ಒಂದು ಭಾಗದಲ್ಲಿ ಪಾರ್ಕ್​ ಮಾಡಿದ್ದ ಕಾರೊಂದರ ಮೇಲೆ ಮರ ಉರುಳಿಬಿದ್ದು ವಾಹನ ನಜ್ಜುಗುಜ್ಜಾಗಿದೆ. ಕಾರನ್ನು ಗ್ಯಾರೇಜ್ ಒಯ್ದರೂ ಸರಿಯಾಗದಷ್ಟು ಜಖಂಗೊಂಡಿದೆ. ಅದೃಷ್ಟವಶಾತ್ ದುರ್ಘಟನೆ ನಡೆದಾಗ ಕಾರಲ್ಲಿ ಯಾರೂ ಇರಲಿಲ್ಲ.

ಇದನ್ನೂ ಓದಿ:    ಮೈಸೂರು: ಮಳೆಯಿಂದಾಗಿ ಮರ ಉರುಳಿ ಬಿದ್ದು ಆಟೋ ಚಾಲಕ ಸಾವು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.