ಯಲಹಂಕ ರೆಸ್ಟೋರೆಂಟ್​ ಅಗ್ನಿ ದುರಂತಕ್ಕೆ ಟ್ವಿಸ್ಟ್: ಮೃತ ಯುವಕ-ಯುವತಿ ಇದ್ದ ರೂಮಿಗೆ ಬಂದಿದ್ದ 3ನೇ ವ್ಯಕ್ತಿ ಯಾರು? ಆಗಿದ್ದೇನು?

Updated on: Oct 10, 2025 | 3:59 PM

ಬೆಂಗಳೂರಿನ ಯಲಹಂಕ ರೆಸ್ಟೋರೆಂಟ್​ನಲ್ಲಿ ಅಗ್ನಿ ಅವಘಡದಲ್ಲಿ ಒಂದೇ ರೂಮಿನಲ್ಲಿದ್ದ ಯುವಕ ಯುವತಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಜಂಟಿ ಆಯುಕ್ತ ರಮೇಶ್ ಬಾನೋತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಬೆಂಕಿ ಹೊತ್ತಿಕೊಂಡಾಗ ಮಹಿಳೆ ಬಾತ್​ ರೂಮ್ ಗೆ ಹೋಗಿದ್ದಾರೆ. ಕೊಠಡಿಯಲ್ಲಿ ಇದ್ದ ವ್ಯಕ್ತಿ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದಾನೆ. ಬಾತ್​ರೂಮ್‌ನಲ್ಲಿದ್ದ ಮಹಿಳೆ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದರು.

ಬೆಂಗಳೂರು, (ಅಕ್ಟೋಬರ್ 10): ಬೆಂಗಳೂರಿನ ಯಲಹಂಕ ರೆಸ್ಟೋರೆಂಟ್​ನಲ್ಲಿ ಅಗ್ನಿ ಅವಘಡದಲ್ಲಿ ಒಂದೇ ರೂಮಿನಲ್ಲಿದ್ದ ಯುವಕ ಯುವತಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಜಂಟಿ ಆಯುಕ್ತ ರಮೇಶ್ ಬಾನೋತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಬೆಂಕಿ ಹೊತ್ತಿಕೊಂಡಾಗ ಮಹಿಳೆ ಬಾತ್​ ರೂಮ್ ಗೆ ಹೋಗಿದ್ದಾರೆ. ಕೊಠಡಿಯಲ್ಲಿ ಇದ್ದ ವ್ಯಕ್ತಿ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದಾನೆ. ಬಾತ್​ರೂಮ್‌ನಲ್ಲಿದ್ದ ಮಹಿಳೆ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾಳೆ. ಘಟನೆಗೆ ಕಾರಣ ಏನು? ಹೇಗೆ ಬೆಂಕಿ ಹೊತ್ತಿಕೊಂಡಿತು? ಅವರ ಮಧ್ಯೆ ಜಗಳ ಆಗಿತ್ತಾ ಎಂದು ತನಿಖೆ ನಡೆಸಲಾಗುತ್ತಿದೆ. ಮೃತ ಯುವಕ ಬರುವ ಮೊದಲು ಬೇರೊಬ್ಬ ಬಂದಿದ್ದನಂತೆ. ಆಕೆಯ ಸಹೋದರ ಅಂತಾ ಹೇಳಿ ವ್ಯಕ್ತಿ ಬಂದು ಹೋಗಿದ್ದ. ಯುವಕ ಬಂದ ಮೇಲೆ ಜಗಳ ಆಗಿ ಈ ರೀತಿ ಆಗಿರುವ ಶಂಕೆ ವ್ಯಕ್ತವಾಗಿದೆ.ಅಲ್ಲಿ ಏನು ನಡೆದಿದೆ ಎಂದು ನಾವು ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.