ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್

Updated on: Dec 24, 2025 | 1:33 PM

ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂಲಕ ಧನುಷ್ ಅವರು ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಬಾಲ್ಯದಲ್ಲೇ ಎಂಗೇಜ್​​ಮೆಂಟ್ ಆಗಿತ್ತು ಎಂಬ ವಿಷಯ ರಿವೀಲ್ ಆಗಿದೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಈ ಬಗ್ಗೆ ಧನುಷ್ ತಾಯಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಧನುಷ್ ಅವರ ಪತ್ನಿ ಸಂಜನಾ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ. ಸಂಬಂಧಿಯನ್ನೇ
ಧನುಷ್​​ಗೆ ತರಲಾಯಿತು. ಧನುಷ್ ಎಂಗೇಜ್​​ಮೆಂಟ್ ವಿಷಯವನ್ನು ಧನುಷ್ ತಾಯಿ ವಿವರಿಸಿದ್ದಾರೆ. ‘ಸಂಜನಾ ನಾಮಕರಣಕ್ಕೆ ಧನುಷ್​​ ಕೈಯಿಂದ ಉಂಗುರ ಹಾಕಿಸಲಾಗಿತ್ತು. ಆಗಲೇ ಎಂಗೇಜ್​​ಮೆಂಟ್ ನಡೆದಿತ್ತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.