ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು

Updated on: Dec 29, 2025 | 11:24 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಾಳು ಅವರು ಎಲಿಮಿನೇಟ್ ಆಗಿದ್ದಾರೆ. ಅವರ ಎಲಿಮಿನೇಷನ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗ ಸ್ಪಂದನಾ ಅವರು ಉಳಿದುಕೊಂಡು, ಮಾಳು ಎಲಿಮಿನೇಟ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಮಾಳು ಅವರು ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಉತ್ತರ ಕರ್ನಾಟಕ ಪ್ರತಿಭೆ ಮಾಳು ಅವರು ಬಿಗ್ ಬಾಸ್​ನಿಂದ ಹೊರ ಬಂದಿದ್ದಾರೆ. ಅವರು ಎಲಿಮಿನೇಟ್ ಆದ ಬಗ್ಗೆ ಅವರಿಗೆ ಬೇಸರ ಇದೆ. ಸ್ಪಂದನಾ ಇನ್ನೂ ಬಿಗ್ ಬಾಸ್​​ನಲ್ಲಿ ಇರುವುದನ್ನು ಅವರು ಪ್ರಶ್ನೆ ಮಾಡಿದ್ದಾರೆ. ‘ನಾನು ಅಥವಾ ಸೂರಜ್ ಇಬ್ಬರಲ್ಲಿ ಒಬ್ಬರು ಉಳಿದುಕೊಳ್ಳಬೇಕಿತ್ತು. ನಮ್ಮಿಬ್ಬರ ಬದಲು ಸ್ಪಂದನಾನ ಉಳಿಸಿಕೊಂಡಿದ್ದನ್ನು ನಾನು ಒಪ್ಪಿಕೊಳ್ಳೋದಿಲ್ಲ. ಅವರಿಗೆ ನಮ್ಮ ರೀತಿಯಲ್ಲಿ ಫಿಸಿಕಲ್ ಟಾಸ್ಕ್ ಆಡೋಕೆ ಬರೋದಿಲ್ಲ’ ಎಂದು ಮಾಳು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More