ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಸ್ಪರ್ಧಿಗಳು

Updated on: Nov 10, 2024 | 6:44 PM

ನಟ ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ಬೇಸರ ಮಾಡಿಕೊಂಡಿದ್ದಾರೆ. ಸುದೀಪ್​ ಎದುರಿನಲ್ಲೇ ಧರ್ಮಗೆ ಅನೇಕರು ನಾಲಾಯಕ್ ಎಂದಿದ್ದಾರೆ. ಈ ಮಾತನ್ನು ಕೇಳಿಸಿಕೊಂಡು ಧರ್ಮ ಅವರು ನೊಂದುಕೊಂಡಿದ್ದಾರೆ. ಭಾನುವಾರದ (ನವೆಂಬರ್​ 10) ಸಂಚಿಕೆಯಲ್ಲಿ ಈ ಘಟನೆ ನಡೆದಿದೆ. ಅದರ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ.

‘ಸೂಪರ್​ ಸಂಡೇ ವಿತ್ ಬಾದ್​ಷಾ ಸುದೀಪ’ ಸಂಚಿಕೆಯಲ್ಲಿ ಕೆಲವರು ಆಡಿದ ಮಾತಿನಿಂದ ನಟ ಧರ್ಮ ಕೀರ್ತಿರಾಜ್ ಅವರಿಗೆ ನೋವಾಗಿದೆ. ‘ಮನೆ ಮೆಚ್ಚಿದ ನಾಲಾಯಕ್ ಯಾರು’ ಅಂತ ಸುದೀಪ್ ಕೇಳಿದ್ದಕ್ಕೆ ಅನೇಕರು ಧರ್ಮ ಅವರ ಹೆಸರನ್ನು ಹೇಳಿದ್ದಾರೆ. ‘ಮುನ್ನುಗ್ಗುವ ಗುಣ ಕಡಿಮೆ ಇದೆ. ತಮ್ಮ ತನವನ್ನು ಬಿಟ್ಟುಕೊಟ್ಟು ಆಟ ಆಡಿದ್ದಾರೆ’ ಎಂಬಿತ್ಯಾದಿ ಕಾರಣಗಳನ್ನು ಬಿಗ್ ಬಾಸ್ ಸ್ಪರ್ಧಿಗಳು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More