ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಹನುಮಂತ ಅವರ ಅಭಿಮಾನಿ ಬಳಗ ದೊಡ್ಡದು. ಹನುಮಂತನೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಟ್ರೋಫಿ ಗೆಲ್ಲಬೇಕು ಎಂದು ಕೋಟ್ಯಂತರ ಜನರು ವೋಟ್ ಮಾಡಿದ್ದರು. ಅವರೆಲ್ಲರೂ ಇಂದು (ಜನವರಿ 26) ಬಿಗ್ ಬಾಸ್ ಮನೆಯ ಎದುರು ಸಂಭ್ರಮಾಚರಣೆ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
‘ಉತ್ತರ ಕರ್ನಾಟಕ ಹುಲಿ, ದೋಸ್ತ’ ಎಂದು ಜೈಕಾರ ಕೂಗುತ್ತಾ ಹನುಮಂತ ಅವರ ಅಭಿಮಾನಿಗಳು ಬಿಗ್ ಬಾಸ್ ಮನೆ ಮುಂದೆ ಕುಣಿದಾಡುತ್ತಿದ್ದಾರೆ. ಫ್ಯಾನ್ಸ್ ಸಂಭ್ರಮದ ವಿಡಿಯೋ ಇಲ್ಲಿದೆ. ಅಜಾತಶತ್ರು ಆಗಿ ಹನುಮಂತ ಅವರು ಎಲ್ಲರ ಮನ ಗೆದ್ದರು. ಹಾಗಾಗಿ ಅವರೇ ಬಿಗ್ ಬಾಸ್ ಟ್ರೋಫಿಯನ್ನು ಗೆಲ್ಲಲಿ ಎಂಬುದು ಕೋಟ್ಯಂತರ ಅಭಿಮಾನಿಗಳು ಆಶಯ ಆಗಿತ್ತು. ವೈಲ್ಡ್ ಕಾರ್ಡ್ ಮೂಲಕ ಬಂದರೂ ಕೂಡ ಹನುಮಂತ ಅವರು ಎಲ್ಲರ ಗಮನ ಸೆಳೆಯುವಂತೆ ಆಟ ಆಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.