ರಾಜಮಾತೆ.. ನೀನು ಇವತ್ತು ಸತ್ತೆ: ಗಿಲ್ಲಿ ನಟ ಎದುರು ಅಶ್ವಿನಿ ಗೌಡ ಗಪ್ ಚುಪ್

Updated on: Nov 21, 2025 | 9:47 PM

ಗಿಲ್ಲಿಯನ್ನು ಕಂಡರೆ ಅಶ್ವಿನಿ ಗೌಡ ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರಿಗೆ ದೊಡ್ಡ ಜಗಳ ಆಗಿದೆ. ಅವಕಾಶ ಸಿಕ್ಕಾಗಲೆಲ್ಲ ಗಿಲ್ಲಿ ಅವರು ತಿರುಗೇಟು ನೀಡುತ್ತಲೇ ಇದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ.

ಹಾಸ್ಯ ಕಲಾವಿದ ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಅವರ ಕಾಮಿಡಿಗೆ ವೀಕ್ಷಕರು ಕೂಡ ಫಿದಾ ಆಗಿದ್ದಾರೆ. ಗಿಲ್ಲಿ ನಟನೇ ವಿನ್ನರ್ ಎಂಬ ಅಭಿಪ್ರಾಯ ಇದೆ. ಗಿಲ್ಲಿಯನ್ನು ಕಂಡರೆ ಅಶ್ವಿನಿ ಗೌಡ (Ashwini Gowda) ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ದೊಡ್ಡ ಜಗಳ ಆಗಿದೆ. ಅವಕಾಶ ಸಿಕ್ಕಾಗಲೆಲ್ಲ ಗಿಲ್ಲಿ ಅವರು ತಿರುಗೇಟು ನೀಡುತ್ತಲೇ ಇದ್ದಾರೆ. ಟಾಸ್ಕ್ ಗೆದ್ದರೂ ಸೋತರೂ ಗಿಲ್ಲಿ ಗತ್ತು ಕಡಿಮೆ ಆಗುತ್ತಿಲ್ಲ. ನವೆಂಬರ್ 21ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಏಕವಚನದ ವಿಷಯ ಇಟ್ಟುಕೊಂಡು ಗಿಲ್ಲಿ ಅವರು ಸಖತ್ ಕಾಮಿಡಿ ಮಾಡಿದ್ದಾರೆ. ‘ರಾಜಮಾತೆ ನೀನು ಇವತ್ತು ಸತ್ತೆ’ ಎಂದು ಗಿಲ್ಲಿ ನಟ (Gilli Nata) ಹೊಡೆದ ಡೈಲಾಗ್​​ಗೆ ಇಡೀ ಮನೆ ಗೊಳ್ ಎಂದು ನಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.