ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ ಗೌಡ: ಮತ್ತೆ ಒಂದಾದ ಹಳೇ ಜೋಡಿ

Updated on: Nov 17, 2025 | 9:15 PM

‘ಬಿಗ್ ಬಾಸ್ ಕನ್ನಡ 12’ ಶೋನಲ್ಲಿ ಈಗ 50 ದಿನಗಳು ಕಳೆದಿವೆ. ಆರಂಭದಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರು ಭಾರಿ ಸ್ನೇಹ ಬೆಳೆಸಿದ್ದರು. ಬಳಿಕ ಅವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಈಗ ಅವರಿಬ್ಬರು ಪರಸ್ಪರ ದೃಷ್ಟಿ ತೆಗೆದುಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಜಾಹ್ನವಿ (Jahnavi) ಮತ್ತು ಅಶ್ವಿನಿ ಗೌಡ ಅವರು ಮೊದಲಿಗೆ ಭಾರಿ ಸ್ನೇಹ ಬೆಳೆಸಿದ್ದರು. ನಂತರ ಅವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಆದರೆ ಈಗ ಅವರು ಮತ್ತೆ ಒಂದಾಗಿದ್ದಾರೆ. ಜಗಳ ಮಾಡಿಕೊಳ್ಳುವುದು ಕೂಡ ತಮ್ಮ ಪ್ಲ್ಯಾನ್ ಆಗಿತ್ತು ಎಂಬುದನ್ನು ಸ್ವತಃ ಅಶ್ವಿನಿ ಗೌಡ (Ashwini Gowda) ಅವರು ಬಾಯಿ ಬಿಟ್ಟಿದ್ದರು ಎಂಬುದು ಬೇರೆ ಮಾತು. ಅದೇನೇ ಇರಲಿ, ಈಗ ಅವರಿಬ್ಬರು ಪರಸ್ಪರ ದೃಷ್ಟಿ ತೆಗೆದುಕೊಂಡಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ತಮ್ಮ ಮೇಲೆ ಯಾರದ್ದೇ ಕಣ್ಣು ಬಿದ್ದಿದ್ದರೂ ಅದು ಹೊರಟು ಹೋಗಲಿ ಎಂದು ಎಲ್ಲರ ಹೆಸರು ಹೇಳಿ ದೃಷ್ಟಿ ತೆಗೆದುಕೊಂಡಿದ್ದಾರೆ. ಇದನ್ನು ಕಂಡು ರಘು ಅವರಿಗೆ ಅಚ್ಚರಿ ಆಗಿದೆ. ನವೆಂಬರ್ 17ರ ಎಪಿಸೋಡ್​​ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿ ಹಾಗೂ ‘ಜಿಯೋ ಹಾಟ್​ ಸ್ಟಾರ್’ ಒಟಿಟಿಯಲ್ಲಿ ಪೂರ್ತಿ ಸಂಚಿಕೆ ಪ್ರಸಾರ ಆಗಲಿದೆ. ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆಟದಲ್ಲಿ ಈಗ 50 ದಿನಗಳು ಕಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.