ಸಿನಿಮಾದಲ್ಲಿ ಅಮ್ಮ, ಅತ್ತೆ ಪಾತ್ರ ಸಿಕ್ಕರೆ ಮಾಡುತ್ತೇನೆ: ಬಿಗ್ ಬಾಸ್ ಮಲ್ಲಮ್ಮ

Updated on: Nov 20, 2025 | 10:08 PM

‘ಬಿಗ್ ಬಾಸ್ ಕನ್ನಡ 12’ ಶೋನಿಂದ ಮಲ್ಲಮ್ಮ ಕೆಲವೇ ವಾರದಲ್ಲಿ ಎಲಿಮಿನೇಟ್ ಆದರು. ಅವರು ತಮ್ಮ ಮುಗ್ಧತೆಯಿಂದ ವೀಕ್ಷಕರ ಗಮನ ಸೆಳೆದರು. ಇನ್ನಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಅವರು ಆಸೆ ಇಟ್ಟುಕೊಂಡಿದ್ದರು. ಆದರೆ ಔಟ್ ಆಗಬೇಕಾಯಿತು.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಿಂದ ಮಲ್ಲಮ್ಮ ಅವರು ಕೆಲವೇ ವಾರದಲ್ಲಿ ಔಟ್ ಆದರು. ತಮ್ಮ ಮುಗ್ಧತೆಯಿಂದ ಅವರು ಗಮನ ಸೆಳೆದರು. ಇನ್ನಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಅವರು ಆಸೆ ಇಟ್ಟುಕೊಂಡಿದ್ದರು. ಆದರೆ ಎಲಿಮಿನೇಟ್ ಆಗಬೇಕಾಯಿತು. ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಾಗ ಅಳು ಬಂತು ಎಂದು ಮಲ್ಲಮ್ಮ ಹೇಳಿದ್ದಾರೆ. ಬಿಗ್ ಬಾಸ್ ಶೋನಿಂದ ಎಲಿಮಿನೇಟ್ ಆದ ಬಳಿಕ ಅವರು ಯಾದಗಿರಿಯ ತಮ್ಮೂರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಗ್ ಬಾಸ್ ಆಟದ ನೆನಪುಗಳನ್ನು ಹಾಗೂ ಸುದೀಪ್ ಜೊತೆ ಮಾತನಾಡಿದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ‘ನಮ್ಮ ಊರಲ್ಲಿ ಎಲ್ಲರೂ ಕೂಡ ಸ್ವಾಗತಿಸಿದ್ದು ಬಹಳ ಖುಷಿ ಆಯಿತು’ ಎಂದು ಮಲ್ಲಮ್ಮ (Mallamma) ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಅವಕಾಶ ಸಿಕ್ಕರೆ ನಟಿಸುವುದಾಗಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.