‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಯಶಸ್ ಅವರಿಗೆ ನಯವಂಚಕ ಮತ್ತು ಚಿಲ್ಲರೆ ಬುದ್ಧಿ ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ. ಜಗದೀಶ್ ಅವರು ಯಶಸ್ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಈ ಹಣೆಪಟ್ಟಿಯಿಂದಾಗಿ ಮನಸ್ತಾಪ ಹೆಚ್ಚುವ ಸಾಧ್ಯತೆ ಇದೆ. ಮಂಜ ಕೂಡ ಯಶಸ್ ಅವರನ್ನು ನಯವಂಚಕ ಎಂದು ಕರೆದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ದಿನ ಕಳೆದಂತೆಲ್ಲ ಸ್ಪರ್ಧಿಗಳ ಮುಖವಾಡ ಕಳಚುತ್ತಿದೆ. ದೊಡ್ಮನೆಯ ಸದಸ್ಯರು ಪರಸ್ಪರ ಇರುವ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಲು ಆರಂಭಿಸಿದ್ದಾರೆ. ನವೆಂಬರ್ 15ರ ಭಾನುವಾರದ ಸಂಚಿಕೆಯಲ್ಲಿ ಕೆಲವು ಹಣೆಪಟ್ಟಿಗಳನ್ನು ಸ್ಪರ್ಧಿಗಳಿಗೆ ನೀಡಲು ಕಿಚ್ಚ ಸುದೀಪ್ ಅವರು ಸೂಚಿಸಿದ್ದಾರೆ. ಯಶಸ್ ಅವರಿಗೆ ನಯವಂಚಕ ಮತ್ತು ಚಿಲ್ಲರೆ ಬುದ್ಧಿ ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ. ಜಗದೀಶ್ ಅವರು ಯಶಸ್ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಈ ಹಣೆಪಟ್ಟಿಯಿಂದಾಗಿ ಮನಸ್ತಾಪ ಹೆಚ್ಚುವ ಸಾಧ್ಯತೆ ಇದೆ. ಮಂಜ ಕೂಡ ಯಶಸ್ ಅವರನ್ನು ನಯವಂಚಕ ಎಂದು ಕರೆದಿದ್ದಾರೆ. ನವೆಂಬರ್ 15ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಕಿರಣ್ ಶಾಸ್ತ್ರಿ ಅವರು ಧನುಷ್ ಅವರನ್ನು ಚಿಲ್ಲರೆ ಬುದ್ಧಿ ಎಂದು ಹೇಳಿದ್ದಾರೆ. ಆಸಿಯಾ ಅವರನ್ನು ಡೆಲಿಕೇಟ್ ಡಾರ್ಲಿಂಗ್ ಎಂದು ಸೌಂದರ್ಯಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
