ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ಮಂಜನ ಜೊತೆಗಿನ ಸ್ನೇಹದ ಕಾರಣದಿಂದ ಗಾನವಿ ಅವರನ್ನು ಮಂಜಿ ಎಂದು ಎಲ್ಲರೂ ಕರೆಯುತ್ತಿದ್ದಾರೆ. ನವೆಂಬರ್ 15ರ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಅದೇ ವಿಚಾರವನ್ನು ಮಾತನಾಡಲಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡಿರುವ ಆ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಂಜ ಅವರು ರೀ-ಎಂಟ್ರಿ ಪಡೆದುಕೊಂಡಿದ್ದಾರೆ. ಈ ಮೊದಲು ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಈಗ ಆಟಕ್ಕೆ ಚುರುಕು ಮುಟ್ಟಿಸಲು ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಆದರೆ ಎರಡನೇ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಬಗ್ಗೆ ಅವರು ಗಮನ ಹರಿಸಿದಂತೆ ಕಾಣುತ್ತಿಲ್ಲ. ವೈಲ್ಡ್ ಕಾರ್ಡ್ ಸ್ಪರ್ಧಿಯಾದ ಗಾನವಿ ಜೊತೆ ಅವರು ಆಪ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಟಾಸ್ಕ್ ವೇಳೆಯೂ ಅವರು ಗಾನವಿ ಪರವಾಗಿ ಪಕ್ಷಪಾತ ಮಾಡಿರುವುದು ಎದ್ದು ಕಾಣಿಸಿದೆ. ಮಂಜನ ಜೊತೆಗಿನ ಸ್ನೇಹದ ಕಾರಣದಿಂದ ಗಾನವಿ ಅವರನ್ನು ಮಂಜಿ ಎಂದು ಎಲ್ಲರೂ ಕರೆಯುತ್ತಿದ್ದಾರೆ. ನವೆಂಬರ್ 15ರ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಅದೇ ವಿಚಾರವನ್ನು ಮಾತನಾಡಲಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡಿರುವ ಆ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

