ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

Updated on: Oct 01, 2026 | 6:31 PM

ಹಾಸ್ಯ ನಟ ಪ್ರಶಾಂತ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದು ಎಲ್ಲ ಸ್ಪರ್ಧಿಗಳ ಜೊತೆ ಬೆರೆಯುತ್ತಿದ್ದಾರೆ. ಲೇಟೆಸ್ಟ್ ಸಂಚಿಕೆಯಲ್ಲಿ ಪ್ರಶಾಂತ್, ಸೋನಿಕಾ ಗೌಡ ಮತ್ತು ಗಗನ್ ಚಿನ್ನಪ್ಪ ನಡುವೆ ತಮಾಷೆಯ ಮಾತುಕಥೆ ನಡೆದಿದೆ. ಹೊಸ ಪ್ರೋಮೋ ಇಲ್ಲಿದೆ ನೋಡಿ.

ಹಾಸ್ಯ ನಟ ಪ್ರಶಾಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದು ಎಲ್ಲ ಸ್ಪರ್ಧಿಗಳ ಜೊತೆ ಬೆರೆಯುತ್ತಿದ್ದಾರೆ. ಲೇಟೆಸ್ಟ್ ಸಂಚಿಕೆಯಲ್ಲಿ ಪ್ರಶಾಂತ್, ಸೋನಿಕಾ ಗೌಡ ಮತ್ತು ಗಗನ್ ಚಿನ್ನಪ್ಪ ನಡುವೆ ತಮಾಷೆಯ ಮಾತುಕಥೆ ನಡೆದಿದೆ. ‘ಟಾಸ್ಕ್​ನಲ್ಲಿ ನೀವು ಗೆಲ್ಲಲೇ ಬೇಕು. ಆದರೆ ಟಾಸ್ಕ್ ಗೆದ್ದ ಬಳಿಕ ನೀವು ಶರ್ಟ್ ತೆಗೆಯುವಂತಿಲ್ಲ. ಒಂದು ವೇಳೆ ನೀವು ಶರ್ಟ್ ತೆಗೆದರೆ ನಾನು ಪ್ಯಾಂಟ್ ತೆಗೆಯುತ್ತೇನೆ. ಕರ್ನಾಟಕದ ಜನ ನೋಡಿ ನನ್ನ ಮರ್ಯಾದೆ ಹೋದರೂ ಪರವಾಗಿಲ್ಲ. ನನಗೆ ಕೋಪ ಬಂದರೆ ಹಾಗೆಯೇ ಮಾಡುತ್ತೇನೆ’ ಎಂದು ಪ್ರಶಾಂತ್ ಅವರು ಗಗನ್ ಚಿನ್ನಪ್ಪಗೆ ಹೇಳಿದ್ದಾರೆ. ಅವರ ಮಾತು ಕೇಳಿದ ಸೋನಿಕಾ ಗೌಡ ಅವರು ಬಿದ್ದು ಬಿದ್ದು ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More