‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ

Edited By:

Updated on: Nov 16, 2026 | 3:48 PM

ಸೋನಿಕಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಟ್ ಆದ ಬಳಿಕ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಟಾಸ್ಕ್ ವೇಳೆ ತಮಗೆ ಪೆಟ್ಟಾಗಿದ್ದರ ಬಗ್ಗೆ ಅವರು ವಿವರ ನೀಡಿದ್ದಾರೆ. ಸೋನಿಕಾ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು.

ಸೋನಿಕಾ ಗೌಡ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಟ್ ಆದ ಬಳಿಕ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಟಾಸ್ಕ್ ವೇಳೆ ತಮಗೆ ಪೆಟ್ಟಾಗಿದ್ದರ ಬಗ್ಗೆ ಅವರು ವಿವರ ನೀಡಿದ್ದಾರೆ. ಇತ್ತೀಚಿನ ಟಾಸ್ಕ್ ವೇಳೆ ಅವರಿಗೆ ಪೆಟ್ಟಾಗಿತ್ತು. ಕಿರಣ್ ಶಾಸ್ತ್ರಿ ಮತ್ತು ಗಾನವಿ ಅವರ ಕಾರಣದಿಂದ ಸೋನಿಕಾಗೆ ಪೆಟ್ಟಾಗುವಂತಾಗಿತ್ತು. ‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು. ಆಗ ನನಗೆ ತಲೆ ಸುತ್ತುತ್ತಿತ್ತು. 2ನೇ ಸುತ್ತಿನಲ್ಲಿ ಕಿರಣ್ ಶಾಸ್ತ್ರಿ ನನಗೆ ಕಾಲಿನಲ್ಲಿ ಒದ್ದರು. ಮೂರನೇ ಸುತ್ತಿನಲ್ಲಿ ನನ್ನ ಮುಖಕ್ಕೆ ಪೆಟ್ಟು ಬಿತ್ತು. ಇದರಿಂದ ನನಗೆ ಹಿನ್ನಡೆ ಆಯಿತು. ಅದನ್ನೇ ಇಟ್ಟುಕೊಂಡು ಕೊನೆತನಕ ನನ್ನನ್ನು ಕುಗ್ಗಿಸಲು ಎಲ್ಲರೂ ಪ್ರಯತ್ನಿಸಿದರು’ ಎಂದು ಸೋನಿಕಾ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More