AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್

ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್

ರಾಜೇಶ್ ದುಗ್ಗುಮನೆ
|

Updated on:Oct 02, 2026 | 8:41 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ತಾಂಡವ್ ರಾಮ್ ಕಂಬ್ಯಾಕ್ ಮಾಡಿದ್ದಾರೆ. ಅವರು ಬಂದ ಬಳಿಕ ಆಟದ ರೀತಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಿರುವಾಗಲೇ ತಾಂಡವ್ ರಾಮ್ ಅವರು ಮನೆಯ ಬಂದಿಯ ಮುಖವಾಡ ಬಿಚ್ಚಿಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳು ಯಾವ ರೀತಿ ಇದ್ದಾರೆ ಎಂಬುದನ್ನು ತೆರೆದಿಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಈ ವಿಷಯಕ್ಕೆ ಕಿರಿಕ್ ಜೋರಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ತಾಂಡವ್ ರಾಮ್ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಿದ್ದಾರೆ. ಅವರು ಎಲಿಮಿನೇಟ್ ಆಗಿದ್ದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ಅವರು ಎಪಿಸೋಡ್​ನ ವೀಕ್ಷಣೆ ಮಾಡಿದಂತೆ ಕಾಣಿಸುತ್ತಿದೆ. ಅವರು ಬರುತ್ತಿದ್ದಂತೆ ಕ್ಯಾಪ್ಟನ್ ಆಗಿದ್ದಾರೆ. ಇಷ್ಟೇ ಅಲ್ಲ ಯಾರ ಗುಣ ಹೇಗಿದೆ ಎನ್ನುವುದರ ಬೋರ್ಡ್​ ಸಿಕ್ಕಿಸಿದ್ದಾರೆ. ‘ಸೌಂದರ್ಯಾ ಮುಖವಾಡ ಧರಿಸಿದ್ದಾರೆ’ ಎಂದು ತಾಂಡವ್ ಹೇಳಿದರೆ, ಆಸಿಯಾ ಸ್ನೇಹದಲ್ಲಿ ಲಾಭ ನೋಡುತ್ತಾರೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 02, 2026 08:40 AM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More