Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ

ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ

ಮಂಜುನಾಥ ಸಿ.
|

Updated on: Nov 01, 2024 | 6:24 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಎಲ್ಲ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳು ಬಂದಿವೆ. ಆದರೆ ಸ್ಪರ್ಧಿ ಐಶ್ವರ್ಯಾಗೆ ಕುಟುಂಬ ಇಲ್ಲವಾದ ಕಾರಣ ಸ್ವತಃ ಬಿಗ್​ಬಾಸ್ ಐಶ್ವರ್ಯಾಗೆ ಪತ್ರ ಬರೆದಿದ್ದಾರೆ.

ಬಿಗ್​ಬಾಸ್ ಕನ್ನಡ ಮನೆಯಲ್ಲಿ ಈ ವಾರ ಮನೆಯ ಸದಸ್ಯರಿಗೆ ತಮ್ಮ ತಮ್ಮ ಕುಟುಂಬದವರಿಂದ ಸಂದೇಶಗಳು ಬಂದಿವೆ. ಮನೆಯ ಸಂದೇಶ ಪಡೆಯಲು ಸ್ಪರ್ಧಿಗಳಿಗೆ ಕೆಲವು ಸವಾಲುಗಳನ್ನು ವಿಧಿಸಲಾಗಿತ್ತು. ಮನೆಯ ಬಹುತೇಕ ಸದಸ್ಯರಿಗೆ ಕುಟುಂಬದವರಿಂದ ಸಂದೇಶ ಬಂತು. ಎಲ್ಲರೂ ಖುಷಿಯಿಂದ, ಭಾವುಕತೆಯಿಂದ ಮನೆಯವರ ಸಂದೇಶವನ್ನು ಓದಿ ಖುಷಿ ಪಟ್ಟರು. ಆದರೆ ಸ್ಪರ್ಧಿ ಐಶ್ವರ್ಯಾಗೆ ಕುಟುಂಬ ಇಲ್ಲ. ಅವರಿಗೆ ಅಪ್ಪ-ಅಮ್ಮ ಇಬ್ಬರೂ ಇಲ್ಲವಾದ್ದರಿಂದ ಸ್ವತಃ ಬಿಗ್​ಬಾಸ್​ ಐಶ್ವರ್ಯಾ ಕುಟುಂಬದಂತೆ ಐಶ್ವರ್ಯಾಗೆ ಪತ್ರ ಬರೆದಿದ್ದಾರೆ. ಬಿಗ್​ಬಾಸ್ ಬರೆದ ಪತ್ರ ಓದಿ ಭಾವುಕರಾಗಿದ್ದಾರೆ ಐಶ್ವರ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ