ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ

Updated on: Oct 04, 2024 | 3:06 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದ ಮನೆಯಲ್ಲಿ ಬರೀ ಜಗಳಗಳೇ ನಡೆಯುತ್ತಿದ್ದವು. ಇದೀಗ ಆದರೆ ಈಗ ಸ್ಪರ್ಧಿ ಧನರಾಜ್ ತಮ್ಮ ಮಿಮಿಕ್ರಿ ಪ್ರತಿಭೆ ತೋರಿಸಿ ಮನೆಯ ಸದಸ್ಯರನ್ನು ರಂಜಿಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಬರೀ ಜಗಳಗಳೇ ನಡೆಯುತ್ತಿವೆ. ಲಾಯರ್ ಜಗದೀಶ್ ಅಂತೂ ರೌದ್ರಾವತಾರ ತಾಳಿ ಬಿಟ್ಟಿದ್ದಾರೆ. ಕೆಲವರು ಕಣ್ಣೀರು ಹಾಕಿದ್ದಾರೆ. ಒಂದೆರಡು ದಿನದ ಹಿಂದೆ ಸಹ ಲಾಯರ್ ಜಗದೀಶ್ ವಿರುದ್ಧ ಭರ್ಜರಿಯಾಗಿ ಜಗಳ ಮಾಡಿದ್ದ ಧನರಾಜ್ ಆ ನಂತರ ಹೋಗಿ ಬಿಗ್​ಬಾಸ್ ಎದುರು ಕಣ್ಣೀರು ಹಾಕಿದ್ದರು. ಅದಾದ ಬಳಿಕ ಈಗ ಧನರಾಜ್ ತಮ್ಮ ಪ್ರತಿಭೆಯಿಂದ ಮನೆಯ ಸದಸ್ಯರನ್ನು ರಂಜಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವಿಡಿಯೋಗಳನ್ನು ಹಾಕುತ್ತಿದ್ದ ಧನರಾಜ್, ಬಿಗ್​ಬಾಸ್ ಮನೆಯವರಿಗೆ ತನ್ನ ಮಿಮಿಕ್ರಿ ಪ್ರತಿಭೆ ತೋರಿಸಿದ್ದಾರೆ. ‘ಮುಂಗಾರು ಮಳೆ’ ಡೈಲಾಗ್ ಹೇಳಿ ರಂಜಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More