‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಗಿಲ್ಲಿಗೆ ಅಶ್ವಿನಿ ಆವಾಜ್

Updated on: Nov 18, 2025 | 8:56 AM

ಈ ಬಾರಿಯ ಬಿಗ್ ಬಾಸ್​ನಲ್ಲಿ ಕೇವಲ ಫೈಟ್​, ಫೈಟ್ ಫೈಟ್ ಎಂಬ ರೀತಿ ಆಗಿದೆ. ಈಗ ಸ್ಪರ್ಧಿಗಳ ಮಧ್ಯೆ ಕಿರಿಕ್ ಆಗಿದೆ. ಗೇಮ್ ನಡೆಯುವ ವೇಳೆ ಗಿಲ್ಲಿ ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆಗಿದೆ. ಏಕವಚನ ನೀಡಿದ ವಿಚಾರದಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಪಾಠ ಹೇಳಿಸಿಕೊಂಡಿದ್ದಾರೆ.

ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಜಗಳಗಳು ನಡೆಯುತ್ತಲೇ ಇರುತ್ತವೆ. ಈವಾರವೂ ಅದು ಮುಂದುವರಿದಿದೆ. ಟಾಸ್ಕ್ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಈ ಕಿರಿಕ್​ನಿಂದ ಮನೆಯಲ್ಲಿ ಅಶಾಂತಿ ಮೂಡಿದೆ. ವೀಕ್ಷಕರು ಕೂಡ ಗೇಮ್​ಗಿಂತ ಹೆಚ್ಚಾಗಿ ಫೈಟ್​ನೇ ನೋಡುವಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.